ಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!

cd
Published on

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಪ್ರಕರಣದ ಕಿಂಗ್​ಪಿನ್​ ಬಗ್ಗೆ ಅಚ್ಚರಿಯ ಮಾಹಿತಿ ಲಭ್ಯವಾಗಿದೆ.

ಸಿಡಿ ಪ್ರಕರಣ ಸಂಬಂಧ ಎಸ್​ಐಟಿ ತಂಡ ನಿನ್ನೆಯಿಂದ ಮಿಂಚಿನ ಕಾರ್ಯಾಚರಣೆ ಆರಂಭಿಸಿದ್ದು, ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಕೇಸ್​ನ ಕಿಂಗ್​ಪಿನ್​ ಎನ್ನಲಾದ ವ್ಯಕ್ತಿ, ಯಶವಂತಪುರದಲ್ಲಿ ಬರೋಬ್ಬರಿ 44 ಲಕ್ಷ ರೂ. ನಗದು ಕೊಟ್ಟು ಫಾರ್ಚುನರ್ ಕಾರು ಖರೀದಿಗೆ ಹೋಗಿದ್ದನಂತೆ.

ಈ ಕಿಂಗ್​ಪಿನ್​ಗೆ ಸಿಡಿ ಕೇಸಲ್ಲಿ ಕೋಟ್ಯಂತರ ಹಣ ಟ್ರಾನ್ಸಕ್ಷನ್ ಶಂಕೆ ವ್ಯಕ್ತವಾಗಿದೆ. ಇದೇ ಹಣದಿಂದ ಫುಲ್ ಕ್ಯಾಶ್ ಕೊಟ್ಟು ಶಂಕಿತ ಕಿಂಗ್​ಪಿನ್​ ಐಷಾರಾಮಿ ಕಾರು ಖರೀದಿಗೆ ಮುಂದಾಗಿದ್ದ. ಆದರೆ, 2 ಲಕ್ಷ ರೂ. ಮಾತ್ರ ಕ್ಯಾಶ್ ಕೊಟ್ಟು, ಉಳಿದ ಹಣವನ್ನು ಅಕೌಂಟ್​ಗೆ ಜಮೆ ಮಾಡುವಂತೆ ಶೋ ರೂಂ ಸಿಬ್ಬಂದಿ ಸಲಹೆ ನೀಡಿದ್ದರಂತೆ. ಹಾಗಾಗಿ ಕಾರು ಖರೀದಿಯಿಂದ ಆತ ಹಿಂದೆ ಸರಿದಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ಶಂಕಿತ ಆರೋಪಿಗಳ ಬ್ಯಾಂಕ್ ಖಾತೆ ವಿವರವನ್ನ ಎಸ್​ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net