

ಕೋಲಾರ: ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ನೀಚ ಕೃತ್ಯ ಜಿಲ್ಲೆಯಲ್ಲಿ ಸಂಭವಿಸಿದೆ. ರಸ್ತೆಬದಿಯಲ್ಲಿದ್ದ ಪ್ರಯಾಣಿಕರ ತಂಗುದಾಣದಲ್ಲಿ ಮಲಗಿದ್ದ ವೃದ್ಧೆ ಮೇಲೆ ಹಾಡಹಗಲೇ ಕಾಮುಕರಿಬ್ಬರು ಅತ್ಯಾಚಾರವೆಸಗಿದ್ದು, ಸ್ಥಳೀಯರು ಅಲ್ಲಿಗೆ ಬರುತ್ತಿದ್ದಂತೆ ಆಟೋದಲ್ಲಿ ಪರಾರಿಯಾಗಿರುವ ದುರ್ಘಟನೆ ಇಂದು ಸಂಭವಿಸಿದೆ.
ಕೆಜಿಎಫ್ ತಾಲೂಕಿನ ಬೆಟ್ಕೂರು ತಂಗುದಾಣದಲ್ಲಿ ಮಾನಸಿಕ ಅಸ್ವಸ್ಥ ವೃದ್ಧೆಯೊಬ್ಬರು ಹಲವು ದಿನಗಳಿಂದ ವಾಸವಿದ್ದಾರೆ. ಪೋಸ್ಟರ್ ಅಂಟಿಸಲೆಂದು ಆಟೋದಲ್ಲಿ ಅಲ್ಲಿಗೆ ಬಂದ ಯುವಕರಿಬ್ಬರು ಆ ವೃದ್ಧೆ ಮೇಲೆ ಅತ್ಯಾಚಾರವೆಸುಗುತ್ತಿರುವಾಗಲೇ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾರೆ. ಕೂಡಲೇ ಪೋಸ್ಟರ್ ಸಮೇತ ಆಟೋ ಹತ್ತಿಕೊಂಡು ಪರಾರಿಯಾಗಿದ್ದಾರೆ. ಸ್ಥಳೀಯರು ಕಾಮುಕರು ಓಡಿಹೋಗುತ್ತಿರುವ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಆಟೋ ನಂಬರ್ ಅನ್ನೂ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿರಿ ದ್ವಿತೀಯ ಪಿಯು ವಿದ್ಯಾರ್ಥಿ ಕೊಲೆ! ಪಬ್ಲಿಕ್ ಟಾಯ್ಲೆಟ್ನಲ್ಲಿ ಆ ರಾತ್ರಿ ನಡೆದಿದ್ದಾದರೂ ಏನು?
ಪ್ರಯಾಣಿಕರ ತಂಗುದಾಣ ಗ್ರಾಮದಿಂದ ಸ್ವಲ್ಪ ದೂರದಲ್ಲಿದೆ. ಹಾಗಾಗಿ ಜನ ಸಂಚಾರ ವಿರಳ. ಇನ್ನು ಸಂತ್ರಸ್ತ ವೃದ್ಧೆ ಯಾರು, ಅವರ ಕುಟುಂಬಸ್ಥರು ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ವೃದ್ಧೆಗೆ ಏನು ಕೇಳಿದರೂ ಗೊತ್ತಾಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಪೊಲೀಸರು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾದ ದೃಶ್ಯವನ್ನಾಧರಿಸಿ ಕಾಮುಕರನ್ನು ಬಂಧಿಸಿಬೇಕಿದೆ. ವೃದ್ಧೆ ಮೇಲೆ ಕಾಮುಕರ ಅಟ್ಟಹಾಸ ಮೆರೆದ ಸುದ್ದಿ ಕೇಳಿ ಸ್ಥಳೀಯರು ಆತಂಕಗೊಂಡಿದ್ದಾರೆ.
ಕೆಳದ ತಿಂಗಳು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕಾಮುಕರು ಅಟ್ಟಹಾಸ ಮೆರೆದಿದ್ದರು. ಹೆಣ್ಣುನಾಯಿ ಮೇಲೆ ಅತ್ಯಾಚಾರ ನಡೆದಿತ್ತು. ಇದಾದ ಮುರುದಿನವೇ ಭಿಕ್ಷುಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಕಾಮುಕರ ಪೈಶಾಚಿಕ ಕೃತ್ಯಕ್ಕೆ ನಿರ್ಗತಿಕ ಮಹಿಳೆ ಬಲಿಯಾದ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಇಂತಹದ್ದೇ ಪೈಶಾಚಿಕ ಕೃತ್ಯ ಕೋಲಾರ ಜಿಲ್ಲೆಯಲ್ಲೂ ಸಂಭವಿಸಿರುವುದು ದುರಂತ.