ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

death
Published on

ಕಲಬುರಗಿ: ಓಂ ನಗರದ ಅಪಾರ್ಟ್‌ಮೆಂಟ್​ವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆಯಾಗಿದೆ.

ಸುಚಿತ್ರಾ(33) ಮತ್ತು ವಿನಿತ್ (9) ಮೃತ ದುರ್ದೈವಿಗಳು. ಬೆಳಗಾವಿ ಮೂಲದ ಸುಚಿತ್ರಾಗೆ ಬಾಗಲಕೋಟೆಯ ಮುಧೋಳ ಮೂಲದ ಜಗದೀಶ್ ಕಾಂಬಳೆ ಜತೆ 11 ವರ್ಷದ ಹಿಂದೆ ಮದುವೆ ಆಗಿತ್ತು. ಈ ದಂಪತಿಯ ಮಗು ವಿನಿತ್. ಓಂ ನಗರದ ಅಪಾರ್ಟ್‌ಮೆಂಟ್​ನ ಮನೆಯಲ್ಲಿ ದಂಪತಿ ವಾಸವಿದ್ದರು. ಇದನ್ನೂ ಓದಿರಿ ಕಾಂಗ್ರೆಸ್ ಮನೆ ಹೊಸ್ತಿಲಿಗೆ ಬಂದ ಮಧುಬಂಗಾರಪ್ಪ! ಶಿವರಾತ್ರಿ ದಿನವೇ ಮಹತ್ವದ ಚರ್ಚೆ

ಶಿವರಾತ್ರಿ ಹಬ್ಬದ ದಿನವೇ ಮನೆಯಲ್ಲಿ ತಾಯಿ-ಮಗು ಮೃತಪಟ್ಟಿದ್ದು, ಸುಚಿತ್ರಾಳ ಗಂಡನ ಮೇಲೆ ಆಕೆಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಜಗದೀಶ್ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಎಸ್​ಬಿಐ ಬ್ಯಾಂಕಿನ ಡೆಪ್ಯೂಟಿ ಮ್ಯಾನೇಜರ್. ಮಹಾತ್ಮ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವರಾತ್ರಿ ಹಬ್ಬದ ಸಡಗರದಲ್ಲಿರಬೇಕಿದ್ದ ಕುಟುಂಬಸ್ಥರು ಮಗಳು-ಮೊಮ್ಮಗನ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದಾರೆ.

ಇನ್ನು ತನಿಖೆ ನಂತರ ತಾಯಿ-ಮಗು ಸಾವಿಗೆ ಕಾರಣ ಏನು ಎಂದು ಗೊತ್ತಾಗಲಿದೆ. ಇದು ಆತ್ಮಹತ್ಯೆಯೋ? ಕೊಲೆಯೋ ಎಂಬ ಅನುಮಾನಕ್ಕೆ ಉತ್ತರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net