More

    ಪೊಲೀಸ್​ ವಿರುದ್ಧವೇ ದೂರು ಕೊಡ್ತೀನಿ ಎಂದ ಜಾರಕಿಹೊಳಿ ಸಿಡಿ ಕೇಸ್​ ಕಿಂಗ್​ಪಿನ್​ ಪತ್ನಿ!

    ತುಮಕೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಎಸ್​ಐಟಿ ತಂಡ ನಿನ್ನೆಯಿಂದ ಮಿಂಚಿನ ಕಾರ್ಯಾಚರಣೆ ಆರಂಭಿಸಿದ್ದು, ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

    ಸಿಡಿ ಕೇಸ್​ನ ಕಿಂಗ್​ಪಿನ್ ಎನ್ನಲಾದ ಶಿರಾ ತಾಲೂಕು ಭುವನಗಳ್ಳಿ ಗ್ರಾಮದ ನರೇಶ್​ಗೌಡ ಎಂಬಾತನ ನಿವಾಸದ ಮೇಲೂ ಎಸ್​ಐಟಿ ನಿನ್ನೆ ದಾಳಿ ಮಾಡಿತ್ತು. ಇದೀಗ ಪೊಲೀಸರ ವಿರುದ್ಧವೇ ದೂರು ಕೊಡುವುದಾಗಿ ನರೇಶ್​ಗೌಡನ ಪತ್ನಿ ಪೂಜಾ ಹೇಳಿದ್ದಾರೆ. ಇದನ್ನೂ ಓದಿರಿ ಶಿವರಾತ್ರಿ ಜಾಗರಣೆ ವೇಳೆ ನಾಯಿಯ ತಲೆಬುರುಡೆ ಇಟ್ಟು ವಾಮಾಚಾರ! ಬೆಚ್ಚಿಬಿದ್ದ ಕುಟುಂಬ

    ಎಸ್​ಐಟಿ ತಂಡ ಪರಿಶೀಲನೆ ನಡೆಸಿ ಹೋದ ಬಳಿಕ ಸುದ್ದಿಗಾರರೊಂದಿಗೆ ಭುವನಗಳ್ಳಿಯ ಮನೆಯಲ್ಲಿ ಮಾತನಾಡಿದ ಪೂಜಾ, ನಿನ್ನೆ ರಾತ್ರಿ 3.45ಕ್ಕೆ ಎಸ್ಐಟಿ ತಂಡ ನನ್ನ ಮನೆಗೆ ಬಂದಿತ್ತು. ಪತಿ ನರೇಶ್ ಎಲ್ಲಿ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಾನು, ಅವರು ಇಲ್ಲಿಲ್ಲ. 6 ದಿನದಿಂದ ಫೋನ್ ಮಾಡಿಲ್ಲ ಅಂದೆ. ಮನೆಯನ್ನೆಲ್ಲಾ ಸರ್ಚ್ ಮಾಡಿದ್ರು. ನನ್ನ ಮೊಬೈಲ್ ಪರಿಶೀಲನೆ ಮಾಡಿದ್ರು. ಮಗಳ ನಾಮಕರಣದ ಫೋಟೋವನ್ನೂ ಕೇಳಿದ್ರು. ನಾವು ಆಲ್ಬಂ ಮಾಡಿಸಿರಲಿಲ್ಲ. ಹಾಗಾಗಿ ಕೊಟ್ಟಿಲ್ಲ. ನಾಮಕರಣದ ದಿನ ರಾಜಕಾರಣಿಗಳು ಬಂದಿದ್ರು. ನನ್ನ ಪತಿ ವರದಿಗಾರ ಆಗಿದ್ದರಿಂದ ಸಹಜವಾಗಿ ಪರಿಚಯದ ರಾಜಕಾರಣಿಗಳು ಬಂದಿದ್ದಾರೆ. ಅದಕ್ಕೇ ಏನೇನೋ ತಪ್ಪು ಕಲ್ಪನೆ ಬೇಡ. ಅಂದು ತುಂಬಾ ಜನ ಅವರ ಸ್ನೇಹಿತರು ಬಂದಿದ್ರು. ಅವರು ಯಾರ್ಯಾರು ಅಂತಾ ನನಗೆ ಗೊತ್ತಿಲ್ಲ ಎಂದಿದ್ದಾರೆ.

    ನನ್ನ ಪತಿ ನರೇಶ್ ಈಗ ಎಲ್ಲಿದ್ದಾರಂತ ನನಗೆ‌ ಗೊತ್ತಿಲ್ಲ. ಅವರ ಮೇಲೆ ಆರೋಪ ಕೇಳಿ ಬಂದಿದೆ. ಈ ಆರೋಪದಿಂದ ಮುಕ್ತರಾಗಿ‌ ಬರುತ್ತಾರೆ ಎಂಬ ವಿಶ್ವಾಸ ನನಗಿದೆ. ಎಸ್​ಐಟಿ ಅಧಿಕಾರಿಗಳ ವಿರುದ್ಧ ದೂರು ನೀಡುತ್ತೇನೆ. ಮಧ್ಯರಾತ್ರಿ ಏಕಾಏಕಿ ಬಂದು‌ ವಿಚಾರಣೆ ಮಾಡಿದ್ದಾರೆ. ನಾವು ಮಹಿಳೆಯರು ಮಾತ್ರ ಇದ್ವಿ. ಅವರ ತಂಡದಲ್ಲಿ ಕನಿಷ್ಠ ಮಹಿಳಾ ಸಿಬ್ಬಂದಿಯೂ ಇರಲಿಲ್ಲ. ಹಾಗಾಗಿ ನಮಗೆ ತೊಂದರೆಯಾಗಿದೆ ಎಂದು ಪೂಜಾ ಆರೋಪಿಸಿದರು.

    ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

    ಜಾರಕಿಹೊಳಿ ಸಿಡಿ ಕೇಸ್​: ಸಿಕ್ಕಿಬಿದ್ದದ್ದು ಇಬ್ಬರಲ್ಲ, ಐವರು! ಯುವತಿಯೂ ಇದ್ದಾಳೆ

    ರಸ್ತೆಬದಿಯ ತಂಗುದಾಣದಲ್ಲಿ ಹಾಡಹಗಲೇ ವೃದ್ಧೆ ಮೇಲೆ ಅತ್ಯಾಚಾರ! ಪೈಶಾಚಿಕ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts