ರಮೇಶ್​ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್, ಆದ್ರೂ ವಿಚಾರಣೆಗೆ ಹಾಜರಾಗಲ್ಲ!

ramesh jarakiholi
Published on

ಬೆಳಗಾವಿ: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ರಮೇಶ್ ಜಾರಕಿಹೊಳಿಗೆ ಕರೊನಾ ಪಾಸಿಟಿವ್​ ಬಂದಿದ್ದರಿಂದ ಗೋಕಾಕ್​ನ ಆಸ್ಪತ್ರೆಗೆ ಏ.4ರಂದು ದಾಖಲಾಗಿದ್ದರು. ಜಾರಕಿಹೊಳಿಯ ಕಾರು ಚಾಲಕ ಹಾಗೂ ಓರ್ವ ಅಡುಗೆ ಸಿಬ್ಬಂದಿಗೂ ಕರೊನಾ ಪಾಸಿಟಿವ್ ಬಂದಿದ್ದು, ಇವರಿಬ್ಬರೂ ಹೋಮ್ ಐಸೋಲೇಷನ್​ನಲ್ಲಿದ್ದಾರೆ.

ಶುಗರ್ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಅವರನ್ನ ಕೋವಿಡ್ ವಾರ್ಡ್​ನ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಇನ್ನೂ ಮೂರ್ನಾಲ್ಕು ದಿನ ಐಸಿಯುನಲ್ಲೇ ಇರಬೇಕಾಗುತ್ತೆ ಎಂದು ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್ ಹೇಳಿದ್ದರು. ಇಂದು(ಬುಧವಾರ) ಜಾರಕಿಹೊಳಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದ್ದು, ಹೋಂ ಐಸೋಲೇಷನ್​ನಲ್ಲಿ ಇರಲಿದ್ದಾರೆ.

ಇತ್ತ ವಿಚಾರಣೆಗೆ ಸಿಡಿ ಕೇಸ್​ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್​ ನೀಡಿದ್ದು, ಕರೊನಾ ನೆಪದಲ್ಲಿ ವಿಚಾರಣೆಯಿಂದ ತಾತ್ಕಾಲಿಕ ರಿಲೀಫ್​ ಪಡೆಯಲೆಂದೇ ನಾಟಕ ಮಾಡಲಾಗುತ್ತಿದೆ ಎಂಬ ಟೀಕೆಯೂ ಕೇಳಿಬಂದಿತ್ತು. ಇದೀಗ ಹೋಂ ಐಸೋಲೇಷನ್​ಗೆ ಒಳಪಡಬೇಕಿರುವುದರಿಂದ ಸದ್ಯ ವಿಚಾರಣೆಗೆ ಹಾಜರ್​ ಆಗುವುದು ಅನುಮಾನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net