ತೆರೆ ಮೇಲೆ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ ರಮೇಶ್​-ಗಣೇಶ್!

Ramesh Ganesh
Published on

ಬೆಂಗಳೂರು: ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ನಿರ್ದೇಶನದ 'ಸುಂದರಾಂಗ ಜಾಣ' ಚಿತ್ರದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಅಭಿನಯಿಸಿದ್ದರು. ಇದೀಗ ಇವರಿಬ್ಬರೂ ಜೊತೆಯಾಗಿ ಒಂದೇ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಹೌದು.. ರಮೇಶ್ ಅರವಿಂದ್ ಅವರ ಜನ್ಮದಿನವಾದ ಇಂದು ಆ ಕುರಿತ ಮಾಹಿತಿ ಬಹಿರಂಗಗೊಂಡಿದೆ. ರಮೇಶ್-ಗಣೇಶ್ ಇಬ್ಬರೂ ಜೊತೆಯಾಗಿ ಅಭಿನಯಿಸಲಿರುವ ಚಿತ್ರದ ಕುರಿತು ಇಂದು ಅಧಿಕೃತವಾಗಿ ಘೋಷಣೆ ಆಗಿದೆ.

ರಮೇಶ್​ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಚಿತ್ರವನ್ನು ನಿರ್ಮಾಣ ಮಾಡಿದ್ದ ವಿಖ್ಯಾತ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಒಂದು ದಶಕದ ಕನಸು ನನಸಾಗಿದೆ ಎಂದೂ ನಿರ್ಮಾಪಕರು ಹೇಳಿಕೊಂಡಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ವಿಖ್ಯಾತ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಗಣೇಶ್‍ ಅಭಿನಯದ ಈ ಹೊಸ ಚಿತ್ರದಲ್ಲಿ ರಮೇಶ್‍ ಅರವಿಂದ್‍ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಚಿತ್ರ ತಂಡದ ಮೂಲಕ ಇಂದು ರಮೇಶ್ ಅರವಿಂದ್ ಅವರ ಜನ್ಮದಿನಕ್ಕೆ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಲಾಗಿದೆ. ಇದು ವಿಖ್ಯಾತ್ ನಿರ್ಮಾಣದ ಆರನೇ ಚಿತ್ರವಾಗಿದ್ದು, ಅಕ್ಟೋಬರ್​ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net