More

    ಕೂದಲಿನ ಕಾರಣಕ್ಕೇ ಸುದ್ದಿಯಾದ ಅಮ್ಮ-ಮಗ; ಶಾಲೆಯಲ್ಲೂ ಪ್ರವೇಶಕ್ಕೆ ಆಕ್ಷೇಪ!

    ನವದೆಹಲಿ: ಇಲ್ಲಿಬ್ಬರು ತಾಯಿ-ಮಗ ಉದ್ದ ಕೂದಲಿನ ಕಾರಣಕ್ಕೇ ಗಮನ ಸೆಳೆದಿದ್ದಾರೆ. ಹಾಗಂತ ಇಲ್ಲಿ ಗಮನ ಸೆಳೆದ ನೀಳಕೇಶ ತಾಯಿಯದ್ದಲ್ಲ, ಬದಲಿಗೆ ಮಗನದ್ದು. ಈತನ ಉದ್ದ ಕೂದಲಿನ ಕಾರಣಕ್ಕೇ ಶಾಲೆಯಲ್ಲಿ ಪ್ರವೇಶ ನಿರಾಕರಿಸಲಾಗಿದ್ದು, ಮಗನ ಕೂದಲಿನ ಪರವಾಗಿ ತಾಯಿ ದನಿಗೂಡಿಸಿದ್ದಾರೆ.

    ಲಂಡನ್​ನ 8 ವರ್ಷದ ಫರೌಕ್​ ಜೇಮ್ಸ್​ ಎಂಬ ಈ ಬಾಲಕ ಲಂಡನ್​​ನಲ್ಲಿನ ಕೆಲವು ನಿಯಮಗಳ ಕಾರಣದಿಂದಾಗಿ ಪ್ರತಿಷ್ಠಿತ ಶಾಲೆಗೆ ಪ್ರವೇಶ ಪಡೆಯಲು ತೊಂದರೆ ಎದುರಿಸುವಂತಾಗಿದೆ. ಶಾಲೆಯ ನಿಯಮಗಳ ಪ್ರಕಾರ ಹುಡುಗರ ಕೂದಲು ಉದ್ದ ಇರಬಾರದು, ಕತ್ತರಿಸಿಕೊಂಡು ಬರಬೇಕು ಎಂದು ಹೇಳಲಾಗಿದೆ.

    ಇದನ್ನೂ ಓದಿ: ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!

    ಆದರೆ ಇದಕ್ಕೆ ತಾಯಿ ಬಾನಿ ಮಿಲ್ಲರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಡುಗನ ತಂದೆಯ ಮೂಲವಾದ ಘಾನಾ ಸಂಪ್ರದಾಯದ ಪ್ರಕಾರ ಮೂರು ವರ್ಷದ ವರೆಗೆ ಮಕ್ಕಳ ಕೂದಲು ಕತ್ತರಿಸುವಂತಿಲ್ಲ. ಮೂರು ವರ್ಷವಾಗುವಷ್ಟರಲ್ಲಿ ಈತನ ಕೂದಲು ಸೊಂಪಾಗಿ ಬೆಳೆದಿದ್ದು, ಆಮೇಲೆ ಮಗ ಮತ್ತು ನಾನೂ ಅದರ ಬಗ್ಗೆ ಅತೀವ ಪ್ರೀತಿ ಹೊಂದಿರುವುದರಿಂದ ಉಳಿಸಿಕೊಂಡಿದ್ದೇವೆ ಎಂದು ತಾಯಿ ಹೇಳಿದ್ದಾರೆ.

    ಹುಡುಗಿಯರು ಉದ್ದ ಕೂದಲು ಹೊಂದಬಹುದು, ಉದ್ದ ಕೂದಲು ಇರುವ ಹುಡುಗರಿಗೆ ಯಾಕೆ ಆಕ್ಷೇಪ? ಅಷ್ಟಕ್ಕೂ ಕೂದಲಿನ ವಿಷಯದಲ್ಲಿ ಅಸಮಾನತೆ ಯಾಕೆ? ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಈ ತಾಯಿ, ಚೇಂಜ್​.ಆರ್ಗ್​ ಮೂಲಕ ಅರ್ಜಿ ಗುಜರಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಇದೀಗ ಲಂಡನ್​ನಲ್ಲಿ ವ್ಯಾಪಕ ಗಮನ ಸೆಳೆದಿದೆ ಎನ್ನಲಾಗಿದೆ.

    ‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts