ಸಚಿನ್ ಪೈಲಟ್ ಬೆಂಬಲಿಗ ಶಾಸಕರು ಕರ್ನಾಟಕದ ರೆಸಾರ್ಟ್‌ಗೆ ಸ್ಥಳಾಂತರ?

Sachin Pilot 3
Published on

ನವದೆಹಲಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹರಿಯಾಣದ ಮನೇಸರದ ರೆಸಾರ್ಟ್‌ನಲ್ಲಿ ಒಂದು ವಾರದಿಂದ ತಂಗಿದ್ದ ರಾಜಸ್ಥಾನದ 18 ಬಂಡಾಯ ಶಾಸಕರು ಹೋಟೆಲ್‌ನಿಂದ ನಾಪತ್ತೆಯಾಗಿದ್ದು, ಇವರು ಕರ್ನಾಟಕಕ್ಕೆ ಹೋಗಿರಬಹುದು ಎನ್ನಲಾಗಿದೆ.

ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧ ಶಾಸಕ ಭನ್ವರ್ ಲಾಲ್‌ರ ಹೇಳಿಕೆ ಪಡೆಯಲು ಹೋಟೆಲ್‌ಗೆ ತೆರಳಿದ್ದ ರಾಜಸ್ಥಾನ ಪೊಲೀಸರ ತಂಡ ಬರಿಗೈನಲ್ಲಿ ವಾಪಾಸಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ರಾಜಸ್ಥಾನ ಪೊಲೀಸರಿಗೆ ರೆಸಾರ್ಟ್ ಪ್ರವೇಶಿಸುವುದಕ್ಕೆ ಹರಿಯಾಣ ಪೊಲೀಸರು ಶುಕ್ರವಾರ ಸುಮಾರು 1 ತಾಸುಗಳ ಕಾಲ ತಡೆವೊಡ್ಡಿದ್ದರು. ಬಳಿಕ ಅವರನ್ನು ಒಳಬಿಡಲಾಗಿತ್ತು. ಆದರೆ, ಪೊಲೀಸರಿಗೆ ರೆಸಾರ್ಟ್‌ನಲ್ಲಿ ಯಾವುದೇ ಬಂಡಾಯ ಶಾಸಕರು ಪತ್ತೆಯಾಗಿಲ್ಲ. ಪೊಲೀಸರು ಬರುವಷ್ಟರಲ್ಲಿ ಅವರೆಲ್ಲಾ ರೆಸಾರ್ಟ್‌ನ ಮತ್ತೊಂದು ಬಾಗಿಲ ಮೂಲಕ ನಿರ್ಗಮಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ಗೆ ಬೆದರಿಕೆ: ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಕರೆ

ಈ ಶಾಸಕರು ದಕ್ಷಿಣ ಕರ್ನಾಟಕದತ್ತ ಪ್ರಯಾಣ ಬೆಳೆಸಿದ್ದಾರೆ. ಅದರಲ್ಲೂ ಬಿಜೆಪಿ ಸರ್ಕಾರವಿರುವ ರಾಜ್ಯಕ್ಕೇ ಹೋಗಿರಬಹುದು. ಏಕೆಂದರೆ ಅವರ ಭದ್ರತೆಗೆ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಬೇಕೆಂದರೆ ಅವರು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಕ್ಕೆ ಹೋಗಬೇಕು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಕಾಂಗ್ರೆಸ್ ಈಗಾಗಲೇ ಪ್ರತಿಕ್ರಿಯಿಸಿದ್ದು, ಬಿಜೆಪಿ ಆಡಳಿತವಿರುವ ಕರ್ನಾಟಕದ ಹೋಟೆಲ್‌ನಲ್ಲಿ ಶಾಸಕರನ್ನಿಟ್ಟು ಪೈಲಟ್ ರಕ್ಷಣೆ ಪಡೆದಿದ್ದಾರೆ ಎಂದು ಟೀಕಿಸಿದೆ. ಅಲ್ಲದೇ ಬಂಡಾಯ ಶಾಸಕರು ಹೋಟೆಲ್‌ನ ಮತ್ತೊಂದು ಬಾಗಿಲ ಮೂಲಕ ಪರಾರಿಯಾಗಲು ಹರಿಯಾಣ ಪೊಲೀಸರು ನೆರವು ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net