ಹಚ್ಚೆಯಿಂದ ಕೊಲೆಯ ಗುಟ್ಟು ರಟ್ಟು: ತಾನೇ ತೋಡಿದ ಖೆಡ್ಡದಲ್ಲಿ ಬಿದ್ದ ಪತಿ

police 01
ಸಾಂದರ್ಭಿಕ ಚಿತ್ರ
Published on

ಕೋಟಾ: ಪತ್ನಿಯ ಹತ್ಯೆಗೈದು ಆಕೆಯ ಕೊಳೆತ ಶವವನ್ನು ಕಾಲುವೆಯಲ್ಲಿ ಬೀಸಾಕಿದ ಆರೋಪದಡಿ ಪತಿ ಹಾಗೂ ಆತನ ಇಬ್ಬರು ಸಹೋದರರನ್ನು ಬಂಧಿಸಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ರೈಲ್ವೆ ಕಾಲೋನಿ ಪೊಲೀಸ್ ಠಾಣಾ ವ್ಯಾಪ್ತಿಯ ರೊಟೆಡಾ ಮೈನರ್ ಕಾಲುವೆಯಲ್ಲಿ ಮೃತದೇಹವೊಂದು ತೇಲುತ್ತಿರುವ ಬಗ್ಗೆ ಸ್ಥಳಿಯರು ಮಾಹಿತ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಟಿ ಮಹಾವರ್ ಮತ್ತು ಆತನ ಸಹೋದರರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: VIDEO| 150 ಅಡಿ ಎತ್ತರದ ವಿದ್ಯುತ್​​ ಟವರ್ ಏರಿದ ಗೆಳತಿಯಿಂದ ರಂಪಾಟ, ಪ್ರೇಮಿಗಳ ಕಿತ್ತಾಟಕ್ಕೆ ಗ್ರಾಮಸ್ಥರ ಪರದಾಟ

ಘಟನೆ ಹಿನ್ನೆಲೆ:
ಬಂಟಿ ಮಹಾವರ್ ಜುಲೈ 31ರಂದು ತನ್ನ ಪತ್ನಿ ಶಾಲು ಮಹಾವಾರ್​​ಳನ್ನು ಕೊಲೆಗೈದು ಮೃತದೇಹವನ್ನು ಮನೆಯೊಳಗಿನ ಗುಂಡಿಯಲ್ಲಿ ಹೂತು ಹಾಕಿದ್ದ. ಐದಾರು ದಿನಗಳ ನಂತರ ದೇಹವು ಕೊಳೆತು ವಾಸನೆ ಬರಲು ಪ್ರಾರಂಭಿಸಿದ್ದು, ನಂತರ ಆರೋಪಿಗಳು ಶವವನ್ನು ಹೊರತೆಗೆದು ಸಮೀಪದ ಕಾಲುವೆಗೆ ಎಸೆದಿದ್ದಾರೆ.

ಇದಾದ ಬಳಿಕ ಸ್ಥಳೀಯರು ಚರಂಡಿಯಲ್ಲಿ ಶವ ತೇಲುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ದೇಹವು ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದು, ಅದನ್ನು ಗುರುತಿಸುವುದು ಕಷ್ಟಕರವಾಗಿತ್ತು. ಆದರೆ ಮೃತಳ ಮಣಿಕಟ್ಟಿನ ಮೇಲೆ ಬುದ್ಧನ ಹಚ್ಚೆ ಇದ್ದಿದ್ದರಿಂದ, ಇದು ಆಕೆಯ ಗುರುತನ್ನು ಪತ್ತೆ ಹಚ್ಚಲು ಸಹಾಯ ಮಾಡಿತು. ಅಲ್ಲದೇ, ಪೊಲೀಸರು ಜುಲೈ 31 ರಂದು ದಾಖಲಾಗಿದ್ದ ದೂರುಗಳ ಪರಿಶೀಲನೆ ನಡೆಸಿದ್ದು, ಈ ವೇಳೆ ಶಾಲು ಎಂಬ ಮಹಿಳೆ ಕಾಣೆಯಾಗಿದ್ದು ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ಹಾರ್ನ್ ಮಾಡಿದ್ದಕ್ಕೆ ವೈದ್ಯರಿಗೆ ಅಮಾನುಷವಾಗಿ ಥಳಿಸಿದ ಯುವಕ..!

ಕೂಡಲೇ ಅಧಿಕಾರಿಗಳು ಮೃತದೇಹವನ್ನು ಗುರುತಿಸಲು ಆಕೆಯ ಪತಿ ಬಂಟಿಯನ್ನು ಕರೆಯಿಸಿದ್ದು, ಈ ವೇಳೆ ಆತ ಮೃತದೇಹವು ಪತ್ನಿಯದ್ದಲ್ಲ ಎಂದು ಹೇಳಿ ನಿರಾಕರಿಸಿದ್ದಾನೆ. ಆದರೆ, ಮೃತಳ ಜ್ಯೋತಿ ಅದು ತನ್ನ ತಂಗಿಯದೇ ಮೃತದೇಹ ಎಂದು ಗುರುತಿಸಿದ್ದಾಳೆ. ಇದರಿಂದ ಅಧಿಕಾರಿಗಳಿಗೆ ಬಂಟಿ ವಿರುದ್ಧ ಅನುಮಾನ ಮೂಡಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಪರಸ್ಪರ ಭಿನ್ನಾಭಿಪ್ರಾಯದ ಕಾರಣ 2021 ರಿಂದ ಶಾಲುನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ವೇಳೆ ಶಾಲು, ಆತನ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಆದ್ದರಿಂದ ಬಂಟಿ ಮತ್ತು ಸಹೋದರರು ಪ್ಲಾನ್​ ರೂಪಿಸಿದ್ದು, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಲೆಯನ್ನು ಕಲ್ಲಿನಿಂದ ಚಚ್ಚಿ ಸಾಯಿಸಿದ್ದಾರೆ. ಬಳಿಕ ಬಂಟಿ ಆಕೆ ನಾಪತ್ತೆಯಾಗಿದ್ದಾಳೆ ಎಂದಿದ್ದು, ಅನಂತರ ಮೃತಳ ತಂದೆ ರೈಲ್ವೆ ಕಾಲೋನಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net