More

    ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಬೀಗ ತಯಾರಿಸಿದ ವೃದ್ಧ ದಂಪತಿ: ತೂಕ, ಗಾತ್ರ ನೋಡಿ ಎಲ್ಲರೂ ಶಾಕ್​..!

    ಅಲಿಗಢ: ಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿಯಾಗಿರುವ ಅಲಿಗಢದ ಹಿರಿಯ ಕುಶಲಕರ್ಮಿಯೊಬ್ಬರು ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿ ಬೀಗವನ್ನು ತಯಾರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

    ಇದನ್ನೂ ಓದಿ: ಬಿಡಾಡಿ ದನಗಳನ್ನು ರಕ್ಷಿಸಲು ಹೋಗಿ ಕಾರು ಪಲ್ಟಿ: ಪ್ರಾಣ ಬಿಟ್ಟ ಐವರು

    ಭಗವಾನ್ ರಾಮನ ಕಟ್ಟಾ ಭಕ್ತರಾಗಿರುವ ಸತ್ಯಪ್ರಕಾಶ್ ​​ಶರ್ಮಾ, ಕೈಯಿಂದ ಮಾಡಿದ ವಿಶ್ವದ ಅತಿದೊಡ್ಡ ಬೀಗವನ್ನು ತಯಾರಿಸಲು ತಿಂಗಳುಗಟ್ಟಲೆ ಶ್ರಮಿಸಿದ್ದು, ಈ ವರ್ಷದ ಕೊನೆಯಲ್ಲಿ ರಾಮ ಮಂದಿರದ ಅಧಿಕಾರಿಗಳಿಗೆ ಉಡುಗೊರೆಯಾಗಿ ನೀಡಲು ಯೋಜಿಸಿದ್ದಾರೆ. ಅಲ್ಲದೇ, 10 ಅಡಿ ಎತ್ತರ, 4.5 ಅಡಿ ಅಗಲ, 9.5 ಇಂಚು ದಪ್ಪವಿರುವ ಈ ದೈತ್ಯ ಬೀಗವನ್ನು ನಾಲ್ಕು ಅಡಿ ಕೀಲಿಯಿಂದ ತೆಗೆಯಬಹುದಾಗಿದ್ದು, ರಾಮಮಂದಿರವನ್ನು ಗಮನದಲ್ಲಿಟ್ಟುಕೊಂಡೇ ಇದನ್ನು ನಿರ್ಮಿಸಲಾಗಿದೆ.

    ‘ತಾಲಾ ನಗರಿ’ (ಬೀಗಗಳ ನಾಡು) ಎಂದು ಕರೆಯಲ್ಪಡುವ ಅಲಿಘರ್‌ನಲ್ಲಿ ಶರ್ಮಾರವರ ಕುಟುಂಬವು ಒಂದು ಶತಮಾನಕ್ಕೂ ಹೆಚ್ಚು ಕಾಲ ಕೈಯಿಂದ ಮಾಡಿದ ಬೀಗಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇವರು ಬೀಗಗಳ ತಯಾರಿಕೆಗೆ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ನಾವು 6 ಅಡಿ ಎತ್ತರ ಮತ್ತು 3 ಅಡಿ ಅಗಲದ ಬೀಗವನ್ನು ಮಾಡಿದ್ದರು. ಆದರೆ ಕೆಲವರು ದೊಡ್ಡ ಬೀಗವನ್ನು ಮಾಡಲು ಸಲಹೆ ನೀಡಿದ್ದರಿಂದ ಮತ್ತೇ ಬೀಗವನ್ನು ಮರುನಿರ್ಮಾಣ ಮಾಡಿ ಇದನ್ನು ತಯಾರಿಸಿದ್ದು, ಇದಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

    ಇದನ್ನೂ ಓದಿ: ಏಕಾಏಕಿ ಬಿಜೆಪಿ ಸಂಸದನ ಕಚೇರಿ ಧ್ವಂಸಗೊಳಿಸಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪುಂಡರು

    ಈ ಕುರಿತಾಗಿ ಮಾತನಾಡಿದ ಸತ್ಯಪ್ರಕಾಶ್, ಬೀಗವನ್ನು ತಯಾರಿಸಲು ತಮಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಇದು ತಮ್ಮ ಕನಸಿನ ಯೋಜನೆಯಾಗಿತ್ತು. ಇದನ್ನು ನನಸಾಗಿಸಲು ತಮ್ಮ ಜೀವನದ ಉಳಿತಾಯವನ್ನು ಮನಃಪೂರ್ವಕವಾಗಿ ಸುರಿದಿದ್ದು, ದಶಕಗಳಿಂದ ಬೀಗದ ದಂಧೆಯಲ್ಲಿ ತೊಡಗಿರುವ ತಮ್ಮ ಕುಟುಂಬವು ದೇವಸ್ಥಾನಕ್ಕೆ ದೈತ್ಯ ಬೀಗ ಹಾಕಲು ಯೋಚಿಸಿದ್ದೆವು. ಈ ಹಿಂದೆ ಯಾರೂ ಈ ರೀತಿ ಮಾಡಿಲ್ಲ ಎನ್ನುವುದೇ ನಮಗೆ ಪ್ರೇರಣೆಯಾಗಿದೆ ಎಂದಿದ್ದಾರೆ.

    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು ಮಾತನಾಡಿ, ಲಕ್ಷಾಂತರ ಭಕ್ತರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದಾರೆ ಮತ್ತು ಬೀಗವನ್ನು ಎಲ್ಲಿ ಬಳಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts