ಕಳವಾದ ಜೋಡೆತ್ತು ಪತ್ತೆ, ಆರೋಪಿ ಸೆರೆ

1 Min Read
ಕಳವಾದ ಜೋಡೆತ್ತು ಪತ್ತೆ, ಆರೋಪಿ ಸೆರೆ
ಹೊನ್ನಾಳಿಯಲ್ಲಿ ಪತ್ತೆಯಾದ ಎತ್ತುಗಳನ್ನು ಪೊಲೀಸರು ಚೀಲಾಪುರದ ಧರ್ಮನಾಯ್ಕ ಅವರಿಗೆ ಹಿಂತಿರುಗಿಸಿದರು. ತಿಪ್ಪೇಸ್ವಾಮಿ, ಹರೀಶ್, ಸಿಬ್ಬಂದಿ ರವಿ, ಚೇತನ್‌ಕುಮಾರ್ ಇತರರಿದ್ದರು.

ಹೊನ್ನಾಳಿ: ಕಳವಾಗಿದ್ದ ಒಂದು ಜತೆ ಎತ್ತುಗಳೊಂದಿಗೆ ಆರೋಪಿಯನ್ನು ಹೊನ್ನಾಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೀಲಾಪುರದ ಮಹ್ಮದ್ ಆಸಿಫ್ ಬಂಧಿತ ಆರೋಪಿ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಗೊಲ್ಲರಹಳ್ಳಿ ಕ್ರಾಸ್ ಬಳಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಾಹನಗಳನ್ನು ತಡೆದು ಪರಿಶೀಲಿಸುತ್ತಿದ್ದರು. ಆಗ ಸರಕು ಸಾಗಣೆ ವಾಹನದ ಚಾಲಕ ಇಳಿದು ಓಡಲೆತ್ನಿಸಿದ. ಪೊಲೀಸರು ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಎತ್ತುಗಳನ್ನು ಕಳವು ಮಾಡಿದ ವಿಚಾರ ಬಯಲಾಯಿತು. ಘಟನೆ ವಿವರ

ಅಂದಾಜು ಲಕ್ಷ ರೂ. ಬೆಲೆಯ ಎತ್ತುಗಳನ್ನು ಜೂ.13 ರಂದು ಕಳವು ಮಾಡಲಾಗಿದೆ ಎಂದು ಮಾಲೀಕ, ತಾಲೂಕಿನ ಚೀಲಾಪುರದ ಧರ್ಮನಾಯ್ಕ ದೂರು ನೀಡಿದ್ದರು. ಪೊಲೀಸರು ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಪತ್ತೆ ಕಾರ್ಯ ಆರಂಭಿಸಿದ್ದರು.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ, ವಾಹನವನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಎತ್ತುಗಳನ್ನು ಮಾಲೀಕರಿಗೆ ಮರಳಿಸಲಾಗಿದೆ ಎಂದು ಪಿಐ ಸುನಿಲ್‌ಕುಮಾರ್ ತಿಳಿಸಿದರು.

ಪ್ರಶಂಸೆ: ಎತ್ತುಗಳನ್ನು ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಎಎಸ್‌ಐಗಳಾದ ತಿಪ್ಪೇಸ್ವಾಮಿ, ಹರೀಶ್, ಸಿಬ್ಬಂದಿ ರವಿ, ಚೇತನ್‌ಕುಮಾರ್ ಇವರಿಗೆ ಜಿಲ್ಲಾ ಪೊಲಿಸ್‌ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


See also  ಒಂದೇ ಮನೆಯಲ್ಲಿ 60 ಹಾವಿನ ಮರಿ ಪತ್ತೆ
Share This Article