ಹಾರ್ನ್ ಮಾಡಿದ್ದಕ್ಕೆ ವೈದ್ಯನಿಗೆ ಅಮಾನುಷವಾಗಿ ಥಳಿಸಿದ ಯುವಕ..!

honking
ಸಾಂದರ್ಭಿಕ ಚಿತ್ರ
Published on

ಕೊಯಿಕ್ಕೊಡ್: ಕಾರಿನ ಹಾರ್ನ್ ಮಾಡಿದ್ದಕ್ಕಾಗಿ ನಗರದ ಮಧ್ಯಭಾಗದಲ್ಲಿಯೇ ವೈದ್ಯನಿಗೆ ಅಮಾನುಷವಾಗಿ ಥಳಿಸಿರುವ ಘಟನೆ ಕೇರಳದ ಕೊಯಿಕ್ಕೊಡ್​ನಲ್ಲಿ ನಡೆದಿದ

ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಬೀಗ ತಯಾರಿಸಿದ ವೃದ್ಧ ದಂಪತಿ: ತೂಕ, ಗಾತ್ರ ನೋಡಿ ಎಲ್ಲರೂ ಶಾಕ್​..!

ಪೆರಂಪ್ರ ಪೈಥೋತ್ ಜಿದತ್ (25) ಎಂಬಾತನೇ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ವೈದ್ಯ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸರೋವರಂ ಕಡೆಯಿಂದ ಬಂದ ವೈದ್ಯ ವಯನಾಡ್ ಕ್ರಿಶ್ಚಿಯನ್ ಕಾಲೇಜು ಸಿಗ್ನಲ್ ಜಂಕ್ಷನ್‌ನಿಂದ ಎಡಕ್ಕೆ ಹೋಗಬೇಕಿತ್ತು. ಈ ವೇಳೆ ವೈದ್ಯನ ಕಾರು ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದು ಎದುರಿಗೆ ಬಂದ ಕಾರಣಕ್ಕಾಗಿ ಹಾರ್ನ್ ಬಾರಿಸಿದ್ದು, ಆಗ ಯುವಕ ಕಾರಿನಿಂದ ಇಳಿದು ವೈದ್ಯನೊಂದಿಗೆ ಜಗಳವಾಡಿದ್ದಾನೆ.

ಆಗ ವೈದ್ಯರು ಕೂಡಲೇ, ಯುವಕನ ಕಾರನ್ನು ಓವರ್‌ಟೇಕ್ ಮಾಡಿ ಮುಂದೆ ಹೋಗಿದ್ದಾರೆ. ಇಷ್ಟಾದರೂ ಸಹಿತ ಯುವಕನು ವೈದ್ಯನನ್ನು ಬಿಡದೇ ಹಿಂಬಾಲಿಸಿಕೊಂಡು ಹೋಗಿ ಪಿಟಿ ಉಷಾ ಜಂಕ್ಷನ್‌ನಲ್ಲಿ ವೈದ್ಯರ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಗಾಜು ಇಳಿಸಿದ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ, ವೈದ್ಯನನ್ನು ಇತರ ವಾಹನಗಳ ಪ್ರಯಾಣಿಕರು ರಕ್ಷಿಸಿದ್ದು, ಯುವಕನ ವಿರುದ್ಧ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ವೈದ್ಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net