ಬಾಯ್​ಫ್ರೆಂಡ್​ ಜತೆ ಏಕಾಂತದಲ್ಲಿದ್ದ ಯುವತಿಗೆ ಹಿಗ್ಗಾಮುಗ್ಗ ಥಳಿತ: ದುಪ್ಪಟ್ಟ ಕಿತ್ತೆಸೆದ ಕಿರಾತಕರು!

RJ Girl
Published on

ಭರತ್​ಪುರ್: ಬಾಯ್​ಫ್ರೆಂಡ್​ ಜತೆ ಮಾತನಾಡುತ್ತಿದ್ದ ಯುವತಿಯ ಮೇಲೆ ಕೆಲವು ಗೂಂಡಾಗಳು ಹಲ್ಲೆ ಮಾಡಿರುವ ಆತಂಕಕಾರಿ ಘಟನೆ ರಾಜಸ್ಥಾನದ ಭರತ್​ಪುರ್​ ಜಿಲ್ಲೆಯಲ್ಲಿ ಭಾನುವಾರ (ಮಾರ್ಚ್​ 14) ಬೆಳಕಿಗೆ ಬಂದಿದೆ.

ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದಾಗ್ಯು ಆರೋಪಿಗಳ ಮೇಲೆ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆ ಯಾವಾಗ ನಡೆದಿದೆ ಎಂಬುದರ ಖಚಿತ ಮಾಹಿತಿ ಇಲ್ಲ.

ಬಾಯ್​ಫ್ರೆಂಡ್​ ಜತೆ ಮಾತನಾಡುತ್ತಾ ನಿಂತಿದ್ದ ಯುವತಿಯನ್ನು ಎಳೆದುಕೊಂಡ ಸ್ಥಳೀಯ ಗೂಂಡಾಗಳು ಆಕೆಯ ದುಪ್ಪಟ್ಟವನ್ನು ಕಿತ್ತೆಸೆದು ಅಮಾನವೀಯವಾಗಿ ವರ್ತಿಸಿದ್ದಾರೆ. ಯುವತಿ ನೆರವಿಗಾಗಿ ಕೂಗಿಕೊಂಡರು ಯಾರೊಬ್ಬರು ಸಹ ಸಹಾಯಕ್ಕೆ ಮುಂದೆ ಬರಲಿಲ್ಲ. ಹಲ್ಲೆ ನಡೆಸುವ ಮುನ್ನ ಯುವತಿ ಮತ್ತು ಬಾಯ್​ಫ್ರೆಂಡ್​ ಏಕಾಂತದ ಸ್ಥಳದಲ್ಲಿ ಕುಳಿತಿದ್ದರು. ಹಲ್ಲೆ ನಡೆಸುತ್ತಿದ್ದಂತೆ ಬಾಯ್​ಫ್ರೆಂಡ್​ ಆಕೆಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಬಗ್ಗೆ ಮಾತನಾಡಿರುವ ಪೊಲೀಸರು ಘಟನೆಯ ತನಿಖೆ ನಡೆಸಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ. ಘಟನೆ ನಡೆದ ಏರಿಯಾದ ಪೊಲೀಸ್​ ಮುಖ್ಯಸ್ಥರು ಸಹ ಪ್ರಕರಣವನ್ನು ಆದಷ್ಟು ಬೇಗ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net