ಪ್ರಿಯಕರನೊಂದಿಗೆ ಓಡಿ ಬಂದಿದ್ದ ಯುವತಿಯ ದುರಂತ ಅಂತ್ಯ: ನಿಗೂಢ ಸ್ಥಿತಿಯಲ್ಲಿ ಮೃತದೇಹ ಪತ್ತೆ!

Girl 1
Published on

ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಹೊಸಕೋಟೆ ನಗರದ ಎಂವಿ ಬಡಾವಣೆಯ ಮನೆಯಲ್ಲಿ ನಡೆದಿದೆ.

ತುಮಕೂರಿನ ಕೊರಟಗೆರೆ ಮೂಲದ ಅಶ್ವಿನಿ ( 23 ) ಮೃತ ಮಹಿಳೆ. 2 ದಿನಗಳ ಹಿಂದೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಎರಡು ವರ್ಷಗಳ ಹಿಂದೆ ಅಶ್ವಿನಿ ಗಾರ್ಮೆಂಟ್ಸ್​ಗೆ ಹೋಗ್ತಿದ್ದ ವೇಳೆ ಆಟೋ ಡ್ರೈವರ್ ಸುರೇಶ್ ಎಂಬುವನ ಜತೆ ಪ್ರೀತಿಯಾಗಿತ್ತು. ಹೀಗಿರುವಾಗ ಎರಡು ತಿಂಗಳ ಹಿಂದೆ ಅಶ್ವಿನಿಯನ್ನು ಹೊಸಕೋಟೆಗೆ ಕರೆತಂದಿದ್ದ ಸುರೇಶ್​ ಬಾಡಿಗೆ ಮನೆಯಲ್ಲಿಟ್ಟಿದ್ದ. ಆದರೆ, ಇದೀಗ ಅಶ್ವಿನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಅಶ್ವಿನಿ ಸಾವಿನ ವಿಚಾರ ತಿಳಿದ ಆಕೆಯ ಪಾಲಕರು ಸುರೇಶ್ ಕೊಲೆ ಮಾಡಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಸುರೇಶ್ ವಂಚನೆ ಮಾಡಿರುವುದಾಗಿ ಮೂರು ದಿನಗಳ ಹಿಂದೆಯೇ ಅಶ್ವಿನ ಪಾಲಕರು ಸೂಲಿಬೆಲೆಯ ಪೊಲೀಸ್ ಠಾಣೆ ಮೊರೆ ಹೋಗಿದ್ದರು.

ಆದರೆ, ಪ್ರಕರಣ ದಾಖಲಿಸದ ಪೊಲೀಸರು ರಾಜಿ ಮಾಡಿ ಕಳಿಸಿದ್ದರು. ಇದೀಗ ಅಶ್ವಿನಿ ಸಾವಿನ ಬಗ್ಗೆ ಕುಟುಂಬಸ್ಥರಲ್ಲಿ ಅನುಮಾನ ಮೂಡಿದ್ದು, ಕೊಲೆ ಮಾಡಲಾಗಿದೆ ಎಂದು ಆರೋಪಿಸಿ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net