More

    ಜಾರಕಿಹೊಳಿ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯ ನೆರವಿಗೆ ಧಾವಿಸಿದ ರಾಜ್ಯ ಮಹಿಳಾ ಆಯೋಗ

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ಹೇಳಿದ್ದ ‘ಸಂತ್ರಸ್ತ’ ಯುವತಿಯ ನೆರವಿಗೆ ರಾಜ್ಯ ಮಹಿಳಾ ಆಯೋಗ ಧಾವಿಸಿದೆ.

    ಈ ಕುರಿತಂತೆ ಸುಮೋಟೊ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿಕೆ ನೀಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ದು, ‘ಯುವತಿಯ ರಕ್ಷಣೆಗೆ ಮಹಿಳಾ ಆಯೋಗ ಇದೆ. ಸಂತ್ರಸ್ತೆಗೆ ಭದ್ರತೆ ನೀಡುವಂತೆ ಮನವಿ ಮಾಡಿದ್ದೇನೆ. ಪೊಲೀಸ್​ ಆಯುಕ್ತರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಈಗ ನಟ-ನಟಿಯರು ಹೊರಬಂದಿದ್ದಾರೆ, ಮುಂದೆ ನಿರ್ಮಾಪಕ-ನಿರ್ದೇಶಕ ಹೊರಬರಲಿದ್ದಾರೆ: ರಮೇಶ್ ಜಾರಕಿಹೊಳಿ

    ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣದ ಕುರಿತಂತೆ ‘ಸಂತ್ರಸ್ತ’ ಯುವತಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಹೇಳಿಕೆ ನೀಡಿದ್ದು, ”ಪ್ರಕರಣದಲ್ಲಿ ನನ್ನ ಬಲಿಪಶು ಮಾಡಲಾಗಿದ್ದು, ಗೃಹ ಸಚಿವರು ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು” ಎಂದು ಮನವಿ ಮಾಡಿಕೊಂಡಿದ್ದಳು.

    ಅಜ್ಞಾತ ಸ್ಥಳದಿಂದ 34 ಸೆಕೆಂಡ್​ನ ವಿಡಿಯೋ ಮಾಡಿ ಹರಿ ಬಿಟ್ಟಿರುವ ಯುವತಿ, ”ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ ಮರ್ಯಾದೆ ಊರು ತುಂಬಾ ಹರಾಜಾಗಿದೆ. ನನ್ನ ಮನೆ ಹತ್ತಿರ ಬಂದು ಯಾರೋರೊ ಏನೇನೋ ಹೇಳಿದ್ದಾರೆ. ನನ್ನ ತಂದೆ ತಾಯಿ ಹಾಗೂ ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ರಕ್ಷಣೆ ನೀಡಬೇಕು” ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಳು.

    ಜಾರಕಿಹೊಳಿಯಿಂದ ಮೋಸವಾಗಿದೆ, ನನಗೆ ರಕ್ಷಣೆ ಕೊಡಿ: ಹೊಸ ವಿಡಿಯೋದಲ್ಲಿ ‘ಸಂತ್ರಸ್ತ’ ಯುವತಿ ಮೊರೆ!

    ಆಕೆಯ ವಿಡಿಯೋ ನಾನು ನೋಡಿಲ್ಲ, ಅದರ ಹಿಂದೆಯೂ ಷಡ್ಯಂತ್ರವಿದೆ: ರಮೇಶ್ ಜಾರಕಿಹೊಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts