ಬಾಯ್​ಫ್ರೆಂಡ್​ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವತಿ..!

Girl 1
Published on

ಹೈದರಾಬಾದ್​: ಪ್ರೀತಿ ಎಂದರೆ ನಂಬಿಕೆ. ಯಾವಾಗ ಪ್ರೀತಿಯಲ್ಲಿ ನಂಬಿಕೆ ದ್ರೋಹವಾಗುತ್ತದೋ ಅದು ಸಾವಿಗೂ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ದುರಂತ ಕತೆಯೇ ಸಾಕ್ಷಿಯಾಗಿದೆ. ತಾನೂ ಮನಸಾರೆ ಪ್ರೀತಿಸಿದ ಯುವಕನ ಮುಖವಾಡ ಕಳಚಿ ಬಿದ್ದಾಗ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯಲ್ಲಿ ನಡೆದಿದೆ.

  1. ರತ್ನಕುಮಾರಿ (24) ಮೃತ ಯುವತಿ. ಈಕೆ ಖಮ್ಮಮ್​ ಜಿಲ್ಲೆಯ ಮಲಬಂಜಾರಾ ಗ್ರಾಮದ ನಿವಾಸಿ. ಖಮ್ಮಮ್​ನಲ್ಲಿ ದೋಬಿಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ ಖಮ್ಮಮ್​ ಮೂಲದ ಆಟೋ ಚಾಲಕ ಸಂಜಯ್​ ಪರಿಚಯವಾಗಿತ್ತು.

ಆದರೆ, ಸಂಜಯ್​ಗೆ ಈಗಾಗಲೇ ಮದುವೆ ಆಗಿತ್ತು. ವಾಸ್ತವವನ್ನು ಮರೆಮಾಚಿ ರತ್ನ ಕುಮಾರಿಗೆ ದ್ರೋಹವೆಸಗುತ್ತಿದ್ದ. ಮದುವೆ ಆಗಿರುವ ವಿಚಾರ ರತ್ನಕುಮಾರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ಹಿಂದೆ ಈ ವಿಚಾರ ರತ್ನಕುಮಾರಿಗೆ ತಿಳಿದಿದು ಭಾರಿ ಆಘಾತ ಅನುಭವಿಸಿದ್ದಳು. ಆದರೆ, ಈ ನೋವಿನಿಂದ ಹೊರಬಾರದ ರತ್ನಕುಮಾರಿ ಮಾರ್ಚ್​ 9ರಂದು ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾಳೆ. ಮಾರ್ಚ್​ 10ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದಕ್ಕೂ ಮುನ್ನ ನೋವಿನಿಂದ ಒದ್ದಾಡುತ್ತಿದ್ದ ಆಕೆಯನ್ನು ಪಾಲಕರು ಖಮ್ಮಮ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ. ಇದೀಗ ಸಂಜಯ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net