

ಹೊಸದಿಲ್ಲಿ: ನಾವೆಲ್ಲರೂ ಗಮನಿಸಿರುವಂತೆ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಾಗಿಯೇ ಇದೆ. ಬಸ್, ವಿಮಾನ, ಕಾರುಗಳಿಗಿಂತ ರೈಲು ಪ್ರಯಾಣಕ್ಕೆ ತಗಲುವ ವೆಚ್ಚ ಬಹಳ ಕಡಿಮೆಯೇ. ಸಣ್ಣ ಪ್ರಮಾಣದ ಹಣದಲ್ಲಿ ಬಹುದೂರದ ಸ್ಥಳಗಳಿಗೆ ಭೇಟಿ ನೀಡಬಹುದು. ಈ ನಿಟ್ಟಿನಲ್ಲಿ ಅದೆಷ್ಟೋ ಜನರು ದಿನನಿತ್ಯ ರೈಲಿನ ಪ್ರಯಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.
ಅದರಲ್ಲೂ ಕಳೆದ 10-15 ವರ್ಷಗಳಿಗೆ ಹೋಲಿಸಿದರೆ, ಇಂದು ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಊರಿನಿಂದ ಊರಿಗೆ ಮತ್ತು ಯಾತ್ರೆಗಳನ್ನು ಕೈಗೊಳ್ಳುವ ಜನಸಾಮಾನ್ಯರು, ಟಿಕೆಟ್ಗಳನ್ನು ಮುಂಗಡವಾಗಿ ಬುಕ್ ಮಾಡುವ ಮೂಲಕ ಕಾಯ್ದಿರಿಸಿಕೊಳ್ಳುತ್ತಾರೆ. ರೈಲ್ವೇ ಅಧಿಕೃತ ವೆಬ್ಸೈಟ್ನಲ್ಲಿ ಇ-ಟಿಕೆಟ್ ಬುಕ್ ಮಾಡಿ, ತಮ್ಮ ಸೀಟನ್ನು ಖಚಿತಪಡಿಸಿಕೊಳ್ಳುವ ಜನರು, ಪ್ರತಿವರ್ಷ ಎಷ್ಟು ಪ್ರಮಾಣದಲ್ಲಿ ಆನ್ಲೈನ್ ಟಿಕೆಟ್ ಖರೀದಿಸುತ್ತಾರೆ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಐಆರ್ಸಿಟಿಸಿ ಮುಖೇನ ಬುಕ್ ಮಾಡಲಾದ ರೈಲ್ವೆ ಇ-ಟಿಕೆಟ್:
2006-07: 0.68 ಕೋಟಿ
2007-08: 1.89 ಕೋಟಿ
2009-10: 7.20 ಕೋಟಿ
2010-11: 9.69 ಕೋಟಿ
2011-12: 11.61 ಕೋಟಿ
2013-14: 15.80 ಕೋಟಿ
2014-15: 18.30 ಕೋಟಿ
2016-17: 20.93 ಕೋಟಿ
2017-18: 24.66 ಕೋಟಿ
2018-19: 28.41 ಕೋಟಿ
2019-20: 30.19 ಕೋಟಿ
2020-21: 17.40 ಕೋಟಿ
2021-22: 41.74 ಕೋಟಿ
2022-23: 43.13 ಕೋಟಿ