More

    “ಅತ್ತಿಗೆ ಅಣ್ಣನಿಗೆ ಹೊಡೆಯೋದು ಗ್ಯಾರಂಟಿ”; ಟ್ರೋಲ್ ಆಗುತ್ತಿರುವ ಈ ಹಾಟ್ ವಿಡಿಯೋದಲ್ಲಿ ರಾಹುಲ್ ಜೊತೆಯಿರುವ ಸುಂದ್ರಿ ಯಾರು?

    ಮುಂಬೈ: ಜನಪ್ರಿಯ ಗಾಯಕ ರಾಹುಲ್ ವೈದ್ಯ ಅವರ ಹಾಡುಗಳಿಗೆ ಹಾಗೂ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ರಾಹುಲ್ ನಟಿ ದಿಶಾ ಪರ್ಮಾರ್ ಅವರನ್ನು ವಿವಾಹವಾಗಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಇತ್ತೀಚೆಷ್ಟೇ ದಿಶಾ-ರಾಹುಲ್ ತಮ್ಮ ಹೆಣ್ಣು ಮಗುವಿನ ಫೋಟೋವನ್ನು ರಿವೀಲ್ ಮಾಡಿದ್ದರು. ಅಂದಹಾಗೆ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ರಾಹುಲ್ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅದು ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದೆ. ಆಶ್ಚರ್ಯದ ಸಂಗತಿಯೆಂದರೆ, ರಾಹುಲ್ ವಿಡಿಯೋದಲ್ಲಿ ರೊಮ್ಯಾನ್ಸ್ ಮಾಡುತ್ತಿರುವುದು ಪತ್ನಿಯೊಂದಿಗಲ್ಲ.

    ಹೌದು, ರಾಹುಲ್ ವೈದ್ಯ ವಿಡಿಯೋದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ವಿಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಗಮನ ಸೆಳೆದಿದೆ. ಅಷ್ಟೇ ಅಲ್ಲ, ರಾಹುಲ್ ಜೊತೆ ಕಾಣಿಸಿಕೊಂಡ ಆಕೆ ಸಹ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಆಕೆಯ ಮತ್ತು ರಾಹುಲ್ ನಡುವಿನ ಕೆಮಿಸ್ಟ್ರಿಯನ್ನು ನೋಡಿ ಬೆರಗಾಗಿದ್ದಾರೆ.

    ಈಗ ವಿಡಿಯೋ ನೋಡಿದ ಕೆಲವರು ದಿಶಾ ಪರ್ಮಾರ್ ಅವರನ್ನು ನೆನಪಿಸಿಕೊಂಡಿದ್ದು, ರಾಹುಲ್ ಹೆಂಡತಿಯನ್ನು ಬಿಟ್ಟು ಈಗ ಯಾರನ್ನು ಪ್ರೀತಿಸುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ರಾಹುಲ್ ರೋಮ್ಯಾನ್ಸ್ ಮಾಡುತ್ತಿರುವುದು ನಟಿಯ ಜೊತೆಗೆ. ಅದು ಅವರ ಇತ್ತೀಚಿನ ಹಾಡಿನ ಬಿಟಿಎಸ್ ವಿಡಿಯೋ ಅಷ್ಟೇ.

    ರಾಹುಲ್ ವೈದ್ಯ ರೊಮ್ಯಾಂಟಿಕ್ ಸಾಂಗ್ ‘ಮೂನ್ಲೈಟ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದರು. ಇದು ತುಂಬಾ ಹಿಟ್ ಆಗುತ್ತಿದೆ. ಈ ಹಾಡಿನ ಬಿಟಿಎಸ್ ವಿಡಿಯೋವನ್ನು ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್​​​​ನಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ವೈದ್ಯ ಮತ್ತು ಖ್ಯಾತ ರೂಪದರ್ಶಿ, ನಟಿ ವೈಷ್ಣವಿ ಅಂದಾಳೆ ಅವರ ಕೆಮಿಸ್ಟ್ರಿಯನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಹಾಡಿನ ಚಿತ್ರೀಕರಣವನ್ನು ಬಾಲಿಯಲ್ಲಿ ಮಾಡಲಾಗಿದೆ. ಸದ್ಯ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

    ಟ್ರೋಲ್ ಮಾಡುತ್ತಿರುವ ಬಳಕೆದಾರರು 
    ಬಳಕೆದಾರರು ಈ ವಿಡಿಯೋ ನೋಡಿ, “ಇಮ್ರಾನ್ ಹಶ್ಮಿ ಯಾವಾಗ ಗಾಯಕರಾದರು?”, “ದಿಶಾ ಮೇಡಂ ಕೋಪ ಮಾಡಿಕೊಳ್ಳುವುದಿಲ್ಲವೇ?”, “ಅಣ್ಣ, ನೀವು ಚೆನ್ನಾಗಿದ್ದೀರಿ ತಾನೆ, ಎಲ್ಲಿ ನಿಮ್ಮ ಬೇಗಂ”?, “ಅತ್ತಿಗೆ ಅಣ್ಣನನ್ನು ಹೊಡೆಯುವುದು ಗ್ಯಾರಂಟಿ” ಎಂದೆಲ್ಲಾ ನಾನಾ ರೀತಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

    ಬಾಲಿವುಡ್‌ ನಟ ಅಜಯ್‌ ದೇವಗನ್‌ ಮೊದಲ ಪ್ರೀತಿ ಕಾಜೊಲ್ ಅಲ್ಲ, ಹಾಗಾದ್ರೆ ಮತ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts