

ಮುಂಬೈ: ಇಂದು ಪ್ರೀತಿಯ ದಿನ. ಅಂದರೆ 'ಪ್ರೇಮಿಗಳ ದಿನ'. ಈ ದಿನದಂದು ವಿಶೇಷ ವ್ಯಕ್ತಿಗಳಿಂದ ಸಾಮಾನ್ಯ ಜನರವರೆಗೆ ಎಲ್ಲರೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ದಿನವನ್ನು ವಿಶೇಷವಾಗಿಸಲು ಪ್ರತಿಯೊಬ್ಬರೂ ತಮ್ಮ ಸಂಗಾತಿಗಾಗಿ ವಿಭಿನ್ನವಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಾರೆ. ಅವರಲ್ಲಿ ವಿಶೇಷ ಭಾವನೆ ಮೂಡಿಸುತ್ತಾರೆ. ಈ ವಿಶೇಷ ಸಂದರ್ಭದಲ್ಲಿ, ಬಾಲಿವುಡ್ ಸೆಲೆಬ್ರಿಟಿಗಳು ಎಂದಿಗೂ ಹಿಂದುಳಿದಿಲ್ಲ ಮತ್ತು ಏನಾದರೂ ಹೊಸದನ್ನು ಮಾಡಲು ಯೋಚಿಸಿಸುತ್ತಿರುತ್ತಾರೆ.
ಅಂದಹಾಗೆ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಕಳೆದ ವರ್ಷ ವ್ಯಾಲೆಂಟೈನ್ಸ್ ದಿನದಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ತಮ್ಮ ಮೊದಲ ಪ್ರೀತಿಯ ಬಗ್ಗೆ ಹಂಚಿಕೊಂಡಿದ್ದರು.
ಅವರ ಮೊದಲ ಪ್ರೀತಿ ಕಾಜೊಲ್ ಅಲ್ಲ
ಅಜಯ್ ದೇವಗನ್ ಶೇರ್ ಮಾಡಿರುವ ಪೋಸ್ಟ್‌ನಲ್ಲಿ ವಿಶೇಷವಾದ ಸಂಗತಿಯೆಂದರೆ, ತನ್ನ ಮೊದಲ ಪ್ರೀತಿ ಕಾಜೊಲ್ ಅಲ್ಲ ಎಂದು ತಿಳಿಸಿದ್ದಾರೆ. ಮತ್ತಾರೂ ಅಂತೀರಾ ಕ್ಯಾಮೆರಾ. ಹೌದು. ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡು ಮಾತನಾಡಿದ್ದ ಅಜಯ್ ಪೋಸ್ಟ್ಗೆ ಅವರ ಅಭಿಮಾನಿಗಳು ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದರು.
ಅಷ್ಟೇ ಅಲ್ಲ, ಅಜಯ್ ವಿಡಿಯೋವನ್ನು ಹಂಚಿಕೊಳ್ಳುವಾಗ 'ಇದು ಮೊದಲ ನೋಟದಲ್ಲೇ ಪ್ರೀತಿಯೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ಎಲ್ಲೋ ಕ್ಯಾಮೆರಾ ನಿಧಾನವಾಗಿ ನನ್ನ ಪ್ಯಾಶನ್ ಆಯಿತು' ಎಂದು ಬರೆದುಕೊಂಡಿದ್ದರು. ನಾನು ಜಗತ್ತನ್ನು ನೋಡುವ ವಿಧಾನವನ್ನು ವಿಸ್ತರಿಸಿದ್ದಕ್ಕಾಗಿ ಪ್ರಿಯ ಕ್ಯಾಮೆರಾಗೆ ಧನ್ಯವಾದಗಳು. ಕ್ಯಾಮರಾ ನೋಡುವ ರೀತಿಯಲ್ಲಿ ನಿಮ್ಮನ್ನು ನೋಡುವ ವ್ಯಕ್ತಿಯನ್ನು ನೀವೇ ಕಂಡುಕೊಳ್ಳಿ ಎಂದು ತಿಳಿಸಿದ್ದರು.