‘ನನ್ನನ್ನು ಸರ್ ಎಂದು ಕರೆಯಬೇಡಿ’; ತರಕಾರಿ ವ್ಯಾಪಾರಿ ಜತೆ ರಾಹುಲ್​ ಗಾಂಧಿ ಮಾತುಕತೆ ವಿಡಿಯೋ ವೈರಲ್​!

Untitled design (6)
Published on

ನವದೆಹಲಿ: ಇಂದು (ಆಗಸ್ಟ್​ 18) ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡ ರಾಮೇಶ್ವರ್​​ ಎಂಬ ತರಕಾರಿ ವ್ಯಾಪರಿಯ ವಿಡಿಯೋ ಭಾರೀ ವೈರಲ್​ ಆಗಿತ್ತು. ಈ ಹಿನ್ನಲೆ ರಾಮೇಶ್ವರ್  ಮತ್ತು ಅವರ ಕುಟುಂಬವನ್ನು ರಾಹುಲ್​, ತಮ್ಮ ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದರು.

ರಾಮೇಶ್ವರ್​ಗೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದ ರಾಹುಲ್​ ಗಾಂಧಿ,​ ಅವರೊಟ್ಟಿಗೆ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ನನ್ನನ್ನು ಸರ್ ಎಂದು ಕರೆಯಬೇಡಿ, ರಾಹುಲ್​ ಎಂದೇ ಕರೆಯಿರಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ತರಕಾರಿ ವ್ಯಾಪರಸ್ಥರಾದ ರಾಮೇಶ್ವರ್​ ಅವರ ಬಗ್ಗೆ ಟ್ವೀಟ್​ನಲ್ಲಿ ಹಂಚಿಕೊಂಡ ರಾಹುಲ್​ ಗಾಂಧಿ, "ರಾಮೇಶ್ವರ್ ಜಿ ಭಾರತದ ಧ್ವನಿಯಾಗಿದ್ದು, ಅವರ ನೋವುಗಳು, ಸಮಸ್ಯೆಗಳು ಮತ್ತು ಸವಾಲುಗಳು ಇಂದಿನ ನಮ್ಮ ಮುಖ್ಯ ಚರ್ಚೆಯಿಂದ ದೂರವಿದೆ. ಅವರ ಧ್ವನಿಯನ್ನು ಆಲಿಸುವುದು ಮತ್ತು ಹೋರಾಟಗಳಲ್ಲಿ ಸಹಕರಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ" ಎಂದು ಬರೆದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ವಿಡಿಯೋದಲ್ಲಿ, ರಾಮೇಶ್ವರ್ ಅವರೊಂದಿಗೆ ರಾಹುಲ್​ ಗಾಂಧಿ ಕೆಲ ಕಾಲ ಸಂವಾದ ನಡೆಸಿದ್ದಾರೆ. ಈ ವೇಳೆ ರಾಹುಲ್​ ಅವರನ್ನು ಸರ್​ ಎಂದು ಸಂಬೋಧಿಸಿದ ರಾಮೇಶ್ವರ್​ಗೆ, ​"ನೀವು ನನ್ನನ್ನು ಸರ್ ಎಂದು ಕರೆಯಬೇಡಿ, ರಾಹುಲ್ ಗಾಂಧಿ ಎಂದೇ ಕರೆಯಿರಿ" ಎಂದು ಹೇಳಿದ್ದಾರೆ. ತಮ್ಮಿಬ್ಬರ ಸಂಭಾಷಣೆಯ ಪೂರ್ತಿ ವಿಡಿಯೋವನ್ನು ಯುಟ್ಯೂಬ್​ನಲ್ಲಿ ಅಪ್ಲೋಡ್​ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net