

ಬೆಂಗಳೂರು: ರಾಜಕೀಯವಾಗಿ ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಮತ್ತೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು #RahulSpeaksForIndia ಎಂಬ ವಿಡಿಯೋ ಸಂದೇಶದ ಮೂಲಕ ದೇಶದ ಗಮನಸೆಳೆದಿದ್ದಾರೆ. ಈ ಬೆಳವಣಿಗೆಯನ್ನು ಲಾಕ್ಡೌನ್ 2.0ರಲ್ಲಿ ರಾಹುಲ್ ಗಾಂಧಿ 2.0 ಎಂಬ ವಿಶ್ಲೇಷಣೆ, ಅಭಿಪ್ರಾಯವೂ ವ್ಯಕ್ತವಾಗಿದೆ. ನಿನ್ನೆ ನಡೆದ ಈ ಕಾರ್ಯಕ್ರಮದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರೂ, ಅವರು ಬಳಸಿದ ಸ್ಟ್ರಾಟಜಿಕ್ ಪದಗಳ ಸಂಖ್ಯೆ ಹೆಚ್ಚಿದ್ದ ಕಾರಣ ಅದೇ ಸ್ಟ್ರಾಟಜಿಲ್ ಆಗಿಯೇ ಟ್ರೋಲ್ ಕೂಡ ಆದ್ರು.
ಇದೇ ವೇಳೆ ನಿನ್ನೆ ನಡೆದ ಈ ಕಾರ್ಯಕ್ರಮದ ವಿಡಿಯೋವನ್ನು ಎಡಿಟ್ ಮಾಡಿ ಒಂದೆರಡು ನಿಮಿಷದ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದೆ. ಅದರಲ್ಲಿ ಅವರು, COVID19 ವಿರುದ್ಧದ ಹೋರಾಟ ತಮ್ಮ ಸ್ವಕ್ಷೇತ್ರ ವಯನಾಡಿನಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಹೋರಾಟದ ನಿರ್ದೇಶನಗಳು ಮೇಲಿಂದ ಕೆಳಕ್ಕೆ ಇರಬಾರದು. ಅದು ಕೆಳಗಿಂದ ಮೇಲಕ್ಕೆ ಇರಬೇಕು. ಪ್ರಧಾನಮಂತ್ರಿಯವರು ರಾಜ್ಯಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿಕೊಂಡಿದ್ದಾರೆ.
ಇದೇ ರೀತಿ, ಒಂದೊಮ್ಮೆ ಸರ್ಕಾರ ಕ್ಷಿಪ್ರವಾಗಿ ಕೆಲಸ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅಷ್ಟೇ ವೇಗವಾಗಿ ಸಾಮಾಜಿಕ ಅಸ್ಥಿರತೆಯೂ ಕಾಡಲಿದೆ. ಈ ಸಂದರ್ಭದಲ್ಲಿ ಜನರನ್ನು ದೂರಲಾಗದು. ಅವರು ಹಸಿವಿನಿಂದ ಹಾಗೆ ಮಾಡುತ್ತಾರೆ. ಸರ್ಕಾರ ಅವರ ಬೇಡಿಕೆಗಳನ್ನು ಪೂರೈಸಬೇಕು ಎಂದೂ ಅವರು ಹೇಳಿದ್ದಾರೆ.
ಅವರ ಈ ವಿಡಿಯೋದ ತುಣುಕುಗಳು ಈಗ ವೈರಲ್ ಆಗಿದ್ದು, ವಿಡಿಯೋಗಳು ಕೂಡ ಸ್ಟ್ರಾಟಜಿಕ್ ಆಗಿ ಎಡಿಟ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸದ್ದುಮಾಡುತ್ತಿವೆ. ಯಾರ್ಯಾರ ಪ್ರತಿಕ್ರಿಯೆ ಏನೇನಿದೆ ನೋಡಿ.. (ಏಜೆನ್ಸೀಸ್)