More

    ಸೂಪರ್​ ಶಿಕ್ಷೆ!- ಲಾಕ್​ಡೌನ್ ನಿಯಮ ಉಲ್ಲಂಘಕರಿಗೆ ಸಿಕ್ತು ಸ್ಮರಣೀಯ ಸಜೆ

    ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಸ್ವಲ್ಪ ಹೆಚ್ಚೇ ಇದ್ದು, ಲಾಕ್​ಡೌನ್ ಇದ್ದರೂ ಅಲ್ಲಿನ ಜನ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿಯುವುದನ್ನು ಮುಂದುವರಿಸಿಯೇ ಇದ್ದಾರೆ. ಪೊಲೀಸರೂ ಅಷ್ಟೇ ದಂಡನೆ ವಿಧಿಸುವಲ್ಲಿಯೂ ಹೊಸ ಹೊಸ ಮಾದರಿಯನ್ನು ಹುಡುಕಿ ಪರಿಚಯಿಸುತ್ತಲೇ ಇದ್ದಾರೆ.

    ಲಾಕ್​ಡೌನ್ ಮೊದಲ ಅವಧಿಯಲ್ಲಿ ಆರತಿ ಎತ್ತಿ, ಮುಖಕ್ಕೆ ತಿಲಕ ಇಟ್ಟು ಜಾಗೃತಿ ಮೂಡಿಸಿದ್ದ ಪೊಲೀಸರು ಈಗ ಇನ್ನೂ ಹೊಸ ರೀತಿಯಲ್ಲಿ ದಂಡನೆ ವಿಧಿಸಲು ಶುರುಮಾಡಿದ್ದಾರೆ. ಪುಣೆ ಪೊಲೀಸರು ಗುರುವಾರ ಕೈಗೊಂಡ ಕ್ರಮ ದೇಶದ ಗಮನಸೆಳೆದಿದೆ. ಲಾಕ್​ಡೌನ್ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದ ಜನರನ್ನು ಒಂದೆಡೆ ನಿಲ್ಲಿಸಿ ಸೋಷಿಯಲ್ ಡಿಸ್ಟೆನ್ಸ್ ಬಗ್ಗೆ ತಿಳಿವಳಿಕೆ ಮೂಡಿಸಿದರು. ಅಷ್ಟೇ ಆದರೆ ಅದು ಇಷ್ಟು ಸುದ್ದಿಯಾಗುತ್ತಿರಲಿಲ್ಲ. ಬರೋಬ್ಬರಿ 200 ಜನ ಅಲ್ಲಿದ್ದರು. ಎಲ್ಲರನ್ನೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿ ಆ ಸುಡು ಬಿಸಿಲಲ್ಲಿ, ಅದೇ ರಸ್ತೆ ಮೇಲೆ ನಾಲ್ಕು ಗಂಟೆ ಕೂರಿಸಿದ್ದರು!

    ಇನ್ನೊಂದು ಘಟನೆಯೂ ಪುಣೆಯಿಂದಲೇ ವರದಿಯಾಗಿದೆ. ಅಲ್ಲಿನ ಬಿಬ್ವೆವಾಡಿ ಪ್ರದೇಶದಲ್ಲಿ ಲಾಕ್​ಡೌನ್ ಇದ್ದಾಗ್ಯೂ ಬೆಳಗ್ಗಿನ ವಾಕಿಂಗ್​ ಗೆ ಹೊರಟಿದ್ದರು ಅನೇಕರು. ಅವರನ್ನೆಲ್ಲ ಅಲ್ಲೇ ನಿಲ್ಲಿಸಿದ ಪೊಲೀಸರು ಎಲ್ಲರಿಗೂ ಯೋಗ, ವ್ಯಾಯಾಮವನ್ನು ಮಾಡಿಸಿದರು. ಸೋಷಿಯಲ್ ಡಿಸ್ಟೆನ್ಸಿಂಗ್ ನಿಯಮವನ್ನೂ ಪಾಲಿಸಲು ಸೂಚಿಸಿದರು. ನಿಯಮ ಉಲ್ಲಂಘಿಸಿ ಹೊರಗೆ ಬಂದರೆ ಇದೇ ಶಿಕ್ಷೆ ಎಂದು ಎಚ್ಚರಿಸಿದ್ದು ವಿಶೇಷ. (ಏಜೆನ್ಸೀಸ್)

    VIDEO| ದೆವ್ವ ಬಂತು ದೆವ್ವ!: ಕರೊನಾ ಲಾಕ್​ಡೌನ್ ಶುರುವಾದಾಗಿನಿಂದ ಈ ಗ್ರಾಮದಲ್ಲಿ ದೆವ್ವದ್ದೇ ಕಾಟ…

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts