More

    ‘ಮಹಾ’ ಪ್ರವಾಹ: 24 ಗಂಟೆಗಳ ಅವಧಿಯಲ್ಲಿ ಖಚಿತವಾಯಿತು ಕೋವಿಡ್19ರ 216 ಕೇಸ್

    ಬೆಂಗಳೂರು: ಕೋವಿಡ್ 19 ಕರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಅಂದರೆ ನಿನ್ನೆ ಸಂಜೆ 5 ರಿಂದ ಇಂದು ಸಂಜೆ 5 ಗಂಟೆವರೆಗಿನ ಅವಧಿಯಲ್ಲಿ 216 ಕೇಸ್​ಗಳು ಖಚಿತವಾಗಿದೆ. ಬಹುತೇಕರು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದು, ಉಳಿದವರಲ್ಲಿ ಕೆಲವರು ನವದೆಹಲಿಯಿಂದ, ಗುಜರಾತ್​ನಿಂದ ಆಗಮಿಸಿದವರೂ ಇದ್ದಾರೆ. ಇನ್ನುಳಿದಂತೆ ಸ್ಥಳೀಯ ಸೋಂಕುಪೀಡಿತರ ಸಂಪರ್ಕಕ್ಕೆ ಒಳಗಾದವರ ಸಂಖ್ಯೆ ಕಡಿಮೆ ಇದೆ.

    ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!

    ರಾಜ್ಯದಲ್ಲಿ ಶನಿವಾರ ಸಕ್ರಿಯವಾಗಿರುವ ಒಟ್ಟು ಕೇಸ್​ಗಳ ಸಂಖ್ಯೆ 1307. ಇಂದು ಆಸ್ಪತ್ರೆಯಿಂದ ಬಿಡುಗಡೆಹೊಂದಿದವರು 11 ಆಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 608. ಐಸಿಯುನಲ್ಲಿ ಸದ್ಯ 13 ಕೋವಿಡ್​ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್​ 19 ಸೋಂಕಿಗೆ ಒಳಗಾದವರ ಪೈಕಿ ಇಂದು ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಇದರಲ್ಲಿ ಎರಡು ಪ್ರಕರಣಗಳಲ್ಲಿ ಕೋವಿಡ್ ಸೋಂಕು ಪೀಡಿತರು ಅನ್ಯಕಾರಣಕ್ಕೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಪ್ರಕರಣಗಳ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.

    ಇದನ್ನೂ ಓದಿ: ಕ್ವಾರಂಟೈನ್​ನಲ್ಲಿದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋದವನನ್ನು ಹುಡುಕುತ್ತಿದ್ದಾರೆ ಪೊಲೀಸರು!

    ಇಂದು ಪತ್ತೆಯಾದ 216 ಹೊಸ ಪ್ರಕರಣಗಳ ಪೈಕಿ ಯಾದಗಿರಿಯಲ್ಲಿ ಗರಿಷ್ಠ 72, ರಾಯಚೂರು 40, ಮಂಡ್ಯ 28, ಚಿಕ್ಕಬಳ್ಳಾಪುರ 26, ಗದಗ 15, ಧಾರವಾಡ 5, ಬೆಂಗಳೂರು ನಗರ, ಹಾಸನಗಳಲ್ಲಿ ತಲಾ 4, ದಾವಣಗೆರೆ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕೋಲಾರಗಳಲ್ಲಿ ತಲಾ 3, ಉತ್ತರ ಕನ್ನಡ 2, ಕಲಬುರಗಿ, ಬೆಳಗಾವಿಗಳಲ್ಲಿ ತಲಾ ಒಂದು ಪ್ರಕರಣಗಳು ಸೇರಿವೆ. ಉಳಿದ ವಿವರಗಳಿಗೆ ಕೋಷ್ಟಕಗಳಿರುವ ಕೆಳಗಿನ ಗ್ಯಾಲರಿಯನ್ನು ಗಮನಿಸಿ…

    ಇದನ್ನೂ ಓದಿ: PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

    ರಾಜ್ಯಕ್ಕೆ ಮಾರಕವಾಯ್ತು ‘ಮುಂಬೈ’; ಅರ್ಧದಿನದಲ್ಲಿ 196 ಹೊಸ ಕೇಸ್​​, ಯಾದಗಿರಿಯಲ್ಲೇ ಅತಿ ಹೆಚ್ಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts