More

    ‘ಕರೊಶ್ಯುರ್’ – ದೆಹಲಿ ಐಐಟಿ ಅಭಿವೃದ್ಧಿಪಡಿಸಿದ ಅಗ್ಗದರದ ಟೆಸ್ಟಿಂಗ್ ಕಿಟ್ ಬಿಡುಗಡೆ

    ನವದೆಹಲಿ: ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, COVID-19 ಡಯಾಗ್ನೋಸ್ಟಿಕ್ ಕಿಟ್ ಅನ್ನು ಬಿಡುಗಡೆ ಮಾಡಿದೆ, ಇದನ್ನು ಸಂಸ್ಥೆ ವಿಶ್ವದ ಅತ್ಯಂತ ಕೈಗೆಟುಕುವ ದರದ ಕಿಟ್ ಎಂದು ಹೇಳಿಕೊಂಡಿದೆ.
    ಅಧಿಕಾರಿಗಳ ಪ್ರಕಾರ, ಐಐಟಿ ದೆಹಲಿ ಅಭಿವೃದ್ಧಿಪಡಿಸಿದ ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್‌ನ ಮೂಲ ಬೆಲೆ 300 ರೂ. ಆಗಿದೆ ಎಂದು ಪಿಟಿಐ ವರದಿ ಮಾಡಿದೆ. ಆರ್‌ಎನ್‌ಎ ಐಸೋಲೇಷನ್ ಮತ್ತು ಪ್ರಯೋಗಾಲಯ ಶುಲ್ಕಗಳನ್ನು ಸೇರಿಸಿದ ನಂತರವೂ, ಕಿಟ್‌ನ ಬೆಲೆ 650 ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ, ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಟ್‌ಗಳಿಗೆ ಹೋಲಿಸಿದರೆ ಇನ್ನೂ ಅಗ್ಗವಾಗಿದೆ. ಈ ಆರ್​ಟಿ-ಪಿಸಿಆರ್ ಪರೀಕ್ಷಾ ಕಿಟ್ ಕೂಡ ತ್ವರಿತವಾಗಿದೆ ಮತ್ತು 3 ಗಂಟೆಗಳಲ್ಲಿ ಫಲಿತಾಂಶಗಳನ್ನು ನೀಡುತ್ತದೆ.

    ಇದನ್ನೂ ಓದಿ: ಬಾಲಕಿಯ ರೇಪ್‌ ಮಾಡಿ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಶವ ಎಸೆದ ಅಪ್ರಾಪ್ತರು!

    ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಈ ಕಿಟ್ ಅನ್ನು ಅಂತರ್ಜಾಲದ ಮೂಲಕ ಬಿಡುಗಡೆ ಮಾಡಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ರೋಗ ನೈದಾನಿಕ ಕಿಟ್ ಪ್ರಧಾನ ಮಂತ್ರಿ ಮೋದಿಯವರ ‘ಸ್ವಾವಲಂಬಿ ಭಾರತ’ದ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.
    ಪರೀಕ್ಷಾ ಕಿಟ್ ಅನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅನುಮೋದಿಸಿದೆ. ಐಐಟಿ ದೆಹಲಿಯು ಕೋವಿಡ್ 19 ಟೆಸ್ಟಿಂಗ್ ವಿಧಾನಕ್ಕೆ ಐಸಿಎಂಆರ್​​ನಿಂದ ಅನುಮತಿ ಪಡೆದ ಮೊದಲ ಶೈಕ್ಷಣಿಕ ಸಂಸ್ಥೆಯಾಗಿದೆ.

    ಕ್ಯಾನ್​​ನಲ್ಲಿ ಇಂಧನ ನೀಡಲು ನಿರಾಕರಿಸಿದ್ದಕ್ಕೆ ಆತ ಏನು ಮಾಡಿದ? ಕೇಳಿದರೆ ನಿಮಗೂ ಶಾಕ್ ಆಗುತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts