More

    ಐಸಿಯುದಲ್ಲಿದ್ದರೂ ಮಹಾಮಾರಿ ವಿರುದ್ಧ ಹೋರಾಡಿ ಬದುಕುಳಿದ ಭಾರತದ ಮೊದಲ ಹಿರಿಯ ವ್ಯಕ್ತಿ ಸುಖಾ ಸಿಂಗ್

    ಥಾಣೆ: ಕೋವಿಡ್ 19 ನಿಂದಾಗಿ ಐಸಿಯು ಸೇರಿದ ಬಳಿಕವೂ ಬದುಕುಳಿದ ಭಾರತದ ಅತ್ಯಂತ ಹಿರಿಯ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿದ್ದಾರೆ ಇಲ್ಲಿಯ 103ವರ್ಷದ ಸುಖಾ ಸಿಂಗ್ ಛಾಬ್ರಾ.
    ಸುಖಾ ಸಿಂಗ್ ಕೋವಿಡ್ 19 ವಿರುದ್ಧ ಯಶಸ್ವಿಯಾಗಿ ಹೋರಾಡಿ ಈಗ ಮನೆಗೆ ಮರಳಿದ್ದಾರೆ.
    ದೇವರ ಜಪ ಮಾಡುತ್ತ ಸೋಮವಾರ ಥಾಣೆಯ ಕೌಶಲ್ಯ ವೈದ್ಯಕೀಯ ಪ್ರತಿಷ್ಠಾನ ಟ್ರಸ್ಟ್ ಆಸ್ಪತ್ರೆಯಿಂದ ಹೊರಬಂದರು.
    ಕರೊನಾ ವೈರಸ್ ಸೋಂಕಿಗೆ ಒಳಗಾದ ಸುಖಾ ಅವರ ಕಿರಿಯ ಸಹೋದರ ತಾರಾ ಸಿಂಗ್ (86) ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಅವರನ್ನು ಐಸಿಯುನಿಂದ ಈಗ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

    ಇದನ್ನೂ ಓದಿ: ಪ್ಯಾಂಗಾಂಗ್​ನ ವಿವಾದಿತ ಪ್ರದೇಶದಲ್ಲಿ ಚೀನಾದ ನಕ್ಷೆ ಬಿಡಿಸಿದ ಚೀನಾ 

    ಲಾಹೋರ್ (ಪಾಕಿಸ್ತಾನ) ದಲ್ಲಿ ಜನಿಸಿದ ಸುಖಾ ಸಿಂಗ್ ಗೆ ಮೇ 31 ರಂದು ಕರೋನವೈರಸ್ ಸೋಂಕು ದೃಢಪಟ್ಟಿತ್ತು.
    ” ಹೆಚ್ಚಿನ ಆರೈಕೆಗಾಗಿ ಆಸ್ಪತ್ರೆಗೆ ದಾಖಲಾಗುವಂತೆ ಅವರಿಗೆ ಕೋರಿದ್ದೆವು. ಅವರು ಮರುಮಾತಿಲ್ಲದೆ ಒಪ್ಪಿಕೊಂಡಿದ್ದರು, ಅವರಿಗೂ ಆರೋಗ್ಯದ ಕಾಳಜಿ ತುಂಬಾ ಇರುವುದರಿಂದ ಈ ಇಳಿ ವಯಸ್ಸಿನಲ್ಲಿಯೂ ಅವರನ್ನು ಎಚ್ಚರಿಸುವ ಯಾವುದೇ ಅಗತ್ಯ ಕಂಡುಬರಲಿಲ್ಲ ಎಂದು ಅವರ ಮೊಮ್ಮಗ ಗುರುದೀಪ್ ಛಾಬ್ರಾ ತಿಳಿಸಿದರು.
    ಜೂನ್ 2 ರಂದು ಸುಖಾ ಸಿಂಗ್ ಅವರನ್ನು ಕೆಎಂಎಫ್​ಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು,
    ತಾರಾ ಸಿಂಗ್ ತಮ್ಮ ಸಹೋದರನನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದ್ದು, ಸ್ವಲ್ಪ ಕಾಲ ಅಲ್ಲಿಯೇ ಉಳಿದಿದ್ದರು. ಆದ್ದರಿಂದ ಅವರಿಗೂ ಸೋಂಕು ದೃಢಪಟ್ಟಿತು.ಇಬ್ಬರೂ ಸೋಂಕಿತರು ಒಂದೇ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. 

    ಇದನ್ನೂ ಓದಿ: ಹೆಚ್ಚುವರಿ ಎಟಿಎಂ ಟ್ರ್ಯಾನ್ಸಾಕ್ಷನ್​ಗೆ ನಾಳೆಯಿಂದ ಬೀಳುತ್ತೆ ದಂಡ!

    ಸುಖಾ ಸಿಂಗ್ ಛಾಬ್ರಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುರಿತು ಕೆಎಂಎಫ್‌ಟಿಯ ತುರ್ತು ಆರೈಕೆ ಮತ್ತು ಔಷಧ ವಿಭಾಗದ ಮುಖ್ಯಸ್ಥ ಅಮಿತ್ ಲಾಲಾ ಖೋಮನೆ ಮಾತನಾಡಿ “ಅವರು ಬಹಳ ಸಂಕೀರ್ಣವೆನಿಸುವ ಆರೋಗ್ಯ ಸ್ಥಿತಿಯಲ್ಲಿದ್ದರು. ಎರಡು ಬಾರಿ ತೀವ್ರ ನಿಗಾ ಘಟಕದಲ್ಲಿ ಮತ್ತು ಹೊರಗೆ ಎರಡು ಬಾರಿ ಇದ್ದರು. ಕೋವಿಡ್, ಪ್ರಿ- ನ್ಯೂಮೋನಿಯಾದೊಂದಿಗೆ ಅಕ್ಯೂಟ್ ರೆಸ್ಪಿರೇಟರಿ ಡಿ​ಸ್ಟ್ರೆಸ್ ಸಿಂಡ್ರೋಮ್ ನಿಂದಾಗಿ ಹೃದಯ ಮತ್ತು ಶ್ವಾಸಕೋಶದ ಕಾರ್ಯಗಳನ್ನು ನಿರ್ವಹಿಸಲು ಐನೋಟ್ರೋಪಿಕ್ ಹಾಗೂ ಸೂಕ್ಷ್ಮ ವೆಂಟಿಲೇಷನ್ ಅಗತ್ಯವಿತ್ತು.
    ಆಸ್ಪತ್ರೆಯಲ್ಲಿ ಛಾಬ್ರಾ ಅವರನ್ನು ವಿಶೇಷ ವೈದ್ಯರ ತಂಡ ನೋಡಿಕೊಳ್ಳುತ್ತಿದ್ದರು ಈ ಹಿರಿ ವಯಸ್ಸಿನಲ್ಲಿ COVID-19 ವಿರುದ್ಧ ಹೋರಾಡುವ ಸ್ವಂತ ದೃಢ ನಿಶ್ಚಯವನ್ನು ಶ್ಲಾಘಿಸಿದರು.
    ಛಾಬ್ರಾ ಅವರ “ಅದ್ಭುತ ಚೇತರಿಕೆ” ಯನ್ನು ಕಂಡು ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಕೆಎಂಎಫ್‌ಟಿ ಟ್ರಸ್ಟಿಗಳಾದ ಅಮೋಲ್ ಭಾನುಶಾಲಿ ಮತ್ತು ಸಮೀಪ್ ಸೊಹೋನಿ ನಿರ್ಧರಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್‌ ಟ್ವಿಟರ್‌ನ ಕಮೆಂಟ್‌ಗಳನ್ನು ಅಳಿಸಲಾಗುತ್ತಿದೆಯೆ? ಪೊಲೀಸರಿಂದ ತನಿಖೆ

    ಲಾಕ್ ಡೌನ್ ಪೂರ್ವದಲ್ಲಿ ತಮ್ಮ ಅಜ್ಜ ಎಂದಿನಂತೆ ತುಂಬಾ ಕ್ರಿಯಾಶೀಲರಾಗಿದ್ದರು. “ಅವರು ಗುರುದ್ವಾರ ಶ್ರೀ ದಾಶ್ಮೇಶ ದರ್ಬಾರ್​​ಗೆ ಭೇಟಿ ನೀಡಿದರು, ಸ್ವತಂತ್ರವಾಗಿ ಮೆಟ್ಟಿಲುಗಳನ್ನು ಹತ್ತಿ, ಪ್ರಾರ್ಥಿಸಿದರು, ಪ್ರಸಾದ್ ಸ್ವೀಕರಿಸಿ ಮನೆಗೆ ಮರಳಿದರು ಎಂದು ಗುರುಮುಖ್ ಸಿಂಗ್ ಹೇಳಿದರು.
    “ಅವರು ಹಲವು ವಾರಗಳಿಂದ ಬಿಟ್ಟಿರುವ ತಮ್ಮ ನೆಚ್ಚಿನ ಪಂಜಾಬಿ ಸಸ್ಯಾಹಾರವನ್ನು ಸವಿಯಲು ಪ್ರಾರಂಭಿಸಿದ ನಂತರ ಶೀಘ್ರದಲ್ಲೇ ಮತ್ತೆ ಎಂದಿನಂತೆ ಕ್ರಿಯಾಶೀಲರಾಗುತ್ತಾರೆ ಎಂದು ನಮಗೆ ವಿಶ್ವಾಸವಿದೆ” ಎಂದು ಗುರುಮುಖ್ ಸಿಂಗ್ ತಿಳಿಸಿದ್ದಾರೆ. 

    vijayavani.net/two-dead-in-visakhapatnam-gas-leak-third-case-in-andhra/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts