More

    ಪ್ಯಾಂಗಾಂಗ್​ನ ವಿವಾದಿತ ಪ್ರದೇಶದಲ್ಲಿ ಚೀನಾದ ನಕ್ಷೆ ಬಿಡಿಸಿದ ಚೀನಾ

    ನವದೆಹಲಿ: ಚೀನಾದವರೇ ಹಾಗೆ. ತಮ್ಮ ಗಡಿ ವಿಸ್ತರಣೆಗಾಗಿ ಯಾವುದೇ ಹಂತಕ್ಕೆ ಹೋಗಬಲ್ಲರು ಎಂಬುದಕ್ಕೆ ಲಡಾಖ್​ನ ಪೂರ್ವಭಾಗದ ಪ್ಯಾಂಗಾಂಗ್​ ಸರೋರವರದ ಬಳಿ ನಡೆಯುತ್ತಿರುವ ಕೆಲ ತಿಂಗಳಿನಿಂದ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಮಿಲಿಟರಿ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಸೇನೆಯ ನ್ನು ಹಿಂತೆಗೆದುಕೊಳ್ಳಲು ಒಪ್ಪುವ ಅವರು, ಬಳಿಕ ಅದಕ್ಕೆ ನಿರಾಕರಿಸುತ್ತಾರೆ. ಒಂದು ಹೆಜ್ಜೆ ಹಿಂದೆ ಸರಿದಂತೆ ಮಾಡಿ, ಹತ್ತಾರು ಹೆಜ್ಜೆ ಮುಂದೆ ಬಂದು ಶತ್ರುವಿನ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಾರೆ.

    ಪ್ಯಾಂಗಾಂಗ್​ ಸರೋವರದ ಬಳಿಯೂ ಇದೇ ತಂತ್ರಗಾರಿಕೆ ಅನುಸರಿಸಿರುವ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು, ಇದೀಗ ವಿವಾದಿತ ಪ್ರದೇಶದಲ್ಲಿ ಚೀನಾದ ಬೃಹತ್​ ನಕ್ಷೆಯನ್ನು ಬರೆದಿದ್ದಾರೆ. ತನ್ಮೂಲಕ ಆ ಪ್ರದೇಶದ ಮೇಲೆ ತಮ್ಮ ಹಕ್ಕು ಸಾಧಿಸುತ್ತಿದ್ದಾರೆ. ಉಪಗ್ರಹ ಚಿತ್ರದಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿದೆ.

    ಇದನ್ನೂ ಓದಿ: ಸುಶಾಂತ್‌ ಟ್ವಿಟರ್‌ನ ಕಮೆಂಟ್‌ಗಳನ್ನು ಅಳಿಸಲಾಗುತ್ತಿದೆಯೆ? ಪೊಲೀಸರಿಂದ ತನಿಖೆ

    ಚೀನಾದ ಅಧಿಕೃತ ಭಾಷೆ ಮ್ಯಾಂಡರಿನ್​ನಲ್ಲಿ ಚೀನಾವನ್ನು ಪ್ರತಿನಿಧಿಸುವ ಚಿತ್ರ ಇದಾಗಿರುವುದಾಗಿ ಹೇಳಲಾಗಿದೆ. ಫಿಂಗರ್​ 4 ಮತ್ತು ಫಿಂಗರ್​ 5 ನಡುವೆ ಬಿಡಿಸಲಾಗಿರುವ ಈ ಚಿತ್ರ ಅಂದಾಜು 81 ಮೀಟರ್​ ಉದ್ದ ಮತ್ತು 25 ಮೀಟರ್​ ಅಗಲವಾಗಿರುವುದಾಗಿ ಹೇಳಲಾಗಿದೆ. ಈ ಪ್ರದೇಶದಲ್ಲಿ ಹಾದುಹೋಗುವ ಪ್ರತಿಯೊಂದು ಉಪಗ್ರಹಕ್ಕೂ ಇದು ಸ್ಪಷ್ಟ ಗೋಚರವಾಗಿದೆ.

    ಇದಕ್ಕೂ ಮುನ್ನ ಚೀನಾ ಸೇನೆಯ ಒಟ್ಟಾರೆ ಕಮಾಂಡರ್​ ವ್ಯಾಂಗ್​ ಹಾಜಿಯಾಂಗ್​ ಭಾರತ ಮತ್ತು ಚೀನಾದ ಗಡಿ ಭಾಗದ ಮುಂಚೂಣಿ ನೆಲೆಯಲ್ಲಿ ಚೀನಾದ ಕ್ಯಾರೆಕ್ಟರ್​ ಬರೆದು ಭಾರತೀಯ ಯೋಧರನ್ನು ಪ್ರಚೋದಿಸಲು ಯತ್ನಿಸಿದ್ದರು.

    ಸದ್ಯದ ಪ್ರಕಾರ ಫಿಂಗರ್​ 4 ಅನ್ನು ಉಭಯ ರಾಷ್ಟ್ರಗಳ ನಡುವಿನ ಗಡಿಯೆಂದು ಗುರುತಿಸಲಾಗುತ್ತದೆ. ಈ ವರ್ಷದ ಮೇನಿಂದ ಆರಂಭವಾಗಿ ಈ ಪ್ರದೇಶದ ಮೇಲೆ ಪ್ರಾಬಲ್ಯ ಸಾಧಿಸಲು ಉಭಯ ರಾಷ್ಟ್ರಗಳ ಯೋಧರ ನಡುವೆ ಜಟಾಪಟಿಗಳು ನಡೆಯುತ್ತಲೇ ಇವೆ. ಮುಳ್ಳುತಂತಿ ಸುತ್ತಿದ ಬಡಿಗೆಗಳು ಮತ್ತು ಉಕ್ಕಿನ ರಾಡ್​ಗಳಿಂದ ಚೀನಿಯರು ಭಾರತೀಯರ ಮೇಲೆ ಹಲ್ಲೆ ಮಾಡುತ್ತಲೇ ಇದ್ದಾರೆ. ಈ ಭಾಗದಲ್ಲಿ ಗರಿಷ್ಠ ಪ್ರಮಾಣದಲ್ಲಿ ಯೋಧರನ್ನು ನಿಯೋಜಿಸಿರುವ ಚೀನಾ, ಫಿಂಗರ್​ 8 ಪ್ರದೇಶದಲ್ಲಿ ಗಸ್ತು ತಿರುಗದಂತೆ ಭಾರತೀಯ ಯೋಧರನ್ನು ತಡೆಯೊಡ್ಡುತ್ತಿದ್ದಾರೆ.

    ಸರಣಿ ಅನಿಲ ದುರಂತಕ್ಕೆ ಸಾಕ್ಷಿಯಾಗುತ್ತಿದೆ ವಿಶಾಖಪಟ್ಟಣ; ಮತ್ತಿಬ್ಬರ ಸಾವು, ಒಬ್ಬ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts