

ಚೆನ್ನೈ: ಇಬ್ಬರು ಬಾಲಕರು ಸೇರಿ ಮೂರನೆಯ ಕ್ಲಾಸಿನ ಬಾಲಕಿಯನ್ನು ರೇಪ್ ಮಾಡಿದ್ದೂ ಅಲ್ಲದೇ ಆಕೆಯನ್ನು ಸಾಯಿಸಿ ಜಮೀನೊಂದರ ಬಳಿ ಇದ್ದ ನೀರಾವರಿ ಕಾಲುವೆಯಲ್ಲಿನ ಪ್ಲಾಸ್ಟಿಕ್ ಡ್ರಮ್ಗೆ ಎಸೆದು ಹೋಗಿರುವ ಭಯಾನಕ ಘಟನೆ ತಮಿಳನಾಡಿನ ಸತ್ತಂಕುಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಸಟ್ಟಂಕುಲಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಗ್ನಾನಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ಬಾಲಕಿ ತನ್ನ ಮನೆಯ ಬಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ಆಟವಾಡುತ್ತಿದ್ದಳು. 9 ವರ್ಷದ ಈ ಬಾಲಕಿ ಮೂರನೆಯ ಕ್ಲಾಸ್ನಲ್ಲಿ ಕಲಿಯುತ್ತಿದ್ದಳು. ಆಕೆ ಮನೆಯ ಒಳಕ್ಕೆ ಬಾರದಾಗ ತಾಯಿ ಮಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಈಕೆಯ ತಾಯಿ ಒಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು. ಮಗಳಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದರೂ ಆಕೆ ಸಿಗಲಿಲ್ಲ. ನಂತರ ಪೊಲೀಸರಲ್ಲಿ ದೂರು ದಾಖಲು ಮಾಡಿದರು.
ಪೊಲೀಸರು ಹುಡುಕಾಟ ನಡೆಸಿದಾಗಿ ಪ್ಲಾಸ್ಟಿಕ್ ಡ್ರಮ್ನಲ್ಲಿ ಬಾಲಕಿಯ ಶವ ಮಧ್ಯಾಹ್ನ 2.30ರ ವೇಳೆ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಅದೇ ಗ್ರಾಮದ 19 ವರ್ಷದ ಇಬ್ಬರು ಅಪ್ರಾಪ್ತರೇ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ. ತೂತುಕುಡಿ ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಎಸ್.ಎಸ್. ಮಣಿಕಾಪುರಂ ಮೂಲದವರು ಈ ಇಬ್ಬರೂ ಆರೋಪಿಗಳು.
ಅವರ ವಿರುದ್ಧ ಕೇಸ್ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಇಬ್ಬರೂ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.