ರಾಜ್ಯಕ್ಕೆ ಮಾರಕವಾಯ್ತು 'ಮುಂಬೈ'; ಅರ್ಧದಿನದಲ್ಲಿ 196 ಹೊಸ ಕೇಸ್​​, ಯಾದಗಿರಿಯಲ್ಲೇ ಅತಿ ಹೆಚ್ಚು

Covid19 Exit plan
Published on

ಬೆಂಗಳೂರು: ಒಂದೆಡೆ ಲಾಕ್​ಡೌನ್​ ವಿಪರೀತ ಸಡಿಲಿಕೆ ಆಗಿದೆ..ಇನ್ನೊಂದೆಡೆ ಕರೊನಾ ಸೋಂಕಿತರ ಸಂಖ್ಯೆ ಭರ್ಜರಿ ಏರುತ್ತಿದೆ. ರಾಜ್ಯದಲ್ಲಿ ನಿನ್ನೆ ಸಂಜೆ 5ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ 196 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1939ಕ್ಕೆ ಏರಿದೆ.

ಇದುವರೆಗೆ ಕರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಹೊಂದಿದವರ ಸಂಖ್ಯೆ 598 ಆಗಿದ್ದು, ಮೃತಪಟ್ಟವರು 42 ಮಂದಿ. ರಾಜ್ಯದಲ್ಲಿ ಸಕ್ರಿಯ ಕರೊನಾ ಸೋಂಕಿತರು 1297 ಮಂದಿ ಎಂದು ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.

ಯಾದಗಿರಿಯಲ್ಲಿ ಅತಿಹೆಚ್ಚು ಅಂದರೆ 72ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು ಅವರೆಲ್ಲರೂ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಮಂಡ್ಯದಲ್ಲಿ 16, ದಕ್ಷಿಣ ಕನ್ನಡದಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 20, ಗದಗದಲ್ಲಿ 15, ರಾಯಚೂರು 39, ಬೆಂಗಳೂರು ನಗರ 4, ದಾವಣಗೆರೆ 3, ಬೆಳಗಾವಿ 1, ಧಾರವಾಡ 1, ಕೋಲಾರ-2, ಹಾಸನ 4, ಉತ್ತರ ಕನ್ನಡ ಇಬ್ಬರಿಗೆ ಕರೊನಾ ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net