3 ವರ್ಷ ಅವಧಿಗೆ ರಾಹುಲ್​ ಗಾಂಧಿ ಸಾಮಾನ್ಯ ಪಾಸ್​ಪೋರ್ಟ್​ ಪಡೆಯಬಹುದು: ದೆಹಲಿ ಹೈಕೋರ್ಟ್​

RG DHC
Published on

ನವದೆಹಲಿ: 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮದ ಕುರಿತು ವ್ಯಂಗ್ಯವಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನನಷ್ಟ ಪ್ರಕರಣದಲ್ಲಿ ಸಂಸತ್​ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ನ್ಯಾಯಾಲಯ ಕೊಂಚ ರಿಲೀಫ್​ ನೀಡಿದೆ.

ಸಂಸತ್​ ಸ್ಥಾನದಿಂದ ಅನರ್ಹಗೊಂಡ ಬಳಿಕ ಸರ್ಕಾರಿ ಸವಲತ್ತುಗಳನ್ನು ಕಳೆದುಕೊಂಡಿದ್ದ ರಾಹುಲ್ ಗಾಂಧಿ ಅವರಿಗೆ ಸಾಮಾನ್ಯ ಪಾಸ್​ಪೋರ್ಟ್​ ಪಡೆಯಲು ದೆಹಲಿ ಹೈಕೋರ್ಟ್​ ಅನುಮತಿ ನೀಡಿದೆ.

ನಿರಾಪೇಕ್ಷಣಾ ಪ್ರಮಾಣಪತ್ರ ಮಂಜೂರು

ಸಂಸದನ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್​ ತಮ್ಮ ಬಳಿ ಇದ್ದ ಡಿಪ್ಲೋಮ್ಯಾಟಿಕ್​ ಪಾಸ್​​ಪೋರ್ಟ್​ಅನ್ನು ಅರ್ಕಾರಕ್ಕೆ ಒಪ್ಪಿಸಿದ ನಂತರ ನಿರಾಪೇಕ್ಷಣಾ ಪ್ರಮಾಣಪತ್ರ(NOC) ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

RG SS

ಅರ್ಜಿ ವಿಚಾರಣೆಯನ್ನು ನಡೆಸಿದ ವೈಭವ್​ ಮೆಹ್ತಾ ಅವರಿದ್ದ ಏಕ ಸದಸ್ಯ ಪೀಠವು ರಾಹುಲ್​ ಗಾಂಧಿ ಅವರ ಮನವಿಯನ್ನು ಪುರಸ್ಕರಿಸಿ 10 ವರ್ಷದ ಬದಲಿಗೆ ಮೂರು ವರ್ಷಗಳ ಸಾಮಾನ್ಯ ಪಾಸ್‌ಪೋರ್ಟ್‌ ಹೊಂದಲು ಅನುಮತಿ ನೀಡಿದೆ.

ಉತ್ತರ ನೀಡುವಂತೆ ಸೂಚನೆ

ರಾಹುಲ್​ ಗಾಂಧಿ ತಮ್ಮ ಬಳಿ ಪಾಸ್​ಪೋರ್ಟ್​ ಹೊಂದಲು ನ್ಯಾಯಾಲಯದ ಅನುಮತಿ ಬೇಕಿತ್ತು ಏಕೆಂದರೆ ನ್ಯಾಷನಲ್​ ಹೆರಾಲ್ಡ್​, ಅಕ್ರಮ ಹಣ ವರ್ಗಾವಣೆ, ಅನುದಾನ ದುರ್ಬಳಕೆ, ಸೇರಿದಂತೆ ಅನೇಕ ಪ್ರಕರಣಗಳ ವಿಚಾರಣೆಯನ್ನು ರಾಹುಲ್​ ಎದುರಿಸುತ್ತಿದ್ದಾರೆ.

 ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಿರಾಪೇಕ್ಷಣಾ ಪ್ರಮಾಣಪತ್ರ(NOC) ನೀಡಿರುವ ಕುರಿತು ಶುಕ್ರವಾರದೊಳಗೆ ಉತ್ತರಿಸುವಂತೆ ನ್ಯಾಯಾಲಯ ಸ್ವಾಮಿ ಅವರಿಗೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net