More

    ಮೊಬೈಲ್​ ಪ್ರಿಯರನ್ನು ದಂಗಾಗಿಸಿದೆ ಈ ಹೊಸ ಸ್ಮಾರ್ಟ್​ಪೋನ್​..!

    ದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ರಸಿದ್ಧ ಶವೊಮಿ ಕಂಪನಿಯು ಗುರುವಾರದಂದು ಶವೊಮಿ ಸಿವಿ-3 ಸ್ಮಾರ್ಟ್​ಪೋನ್​ನ್ನು ಬಿಡುಗಡೆ ಮಾಡಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಈ ಕಂಪನಿಯು ಶವೊಮಿ ಸಿವಿ-2ನ್ನು ಬಿಡುಗಡೆ ಮಾಡಿ, ಮಾರುಕಟ್ಟೆಯಲ್ಲಿ ಯಶಸ್ವಿಗೊಂಡಿತ್ತು. ಇದರ ಬೆನ್ನಲ್ಲೇ ಕಂಪನಿಯು ಶವೊಮಿ ಸಿವಿ-3ನ್ನು ಬಿಡುಗಡೆಗೊಳಿಸಿದೆ.

    ಚೀನಾದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸಿವಿ-3 ಸ್ಮಾರ್ಟ್​ಫೋನ್​ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಗಮನಾರ್ಹವಾದ ಡ್ಯುಯಲ್ ಫ್ರಂಟ್ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿರುವ ಈ ಪೋನ್​ ಹಿಂಬದಿಯಲ್ಲಿ ಮೂರು ಕ್ಯಾಮರಾವನ್ನು ಹೊಂದಿದೆ.

    ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯ, ಡಿಕೆಶಿಗೆ ಅವಮಾನಿಸಬೇಡಿ: ಆರ್.ಅಶೋಕ್ 

    ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoCನಿಂದ ಬೆಂಬಲಿತವಾಗಿರುವ ಈ ಫೋನ್​ 67W ಫಾಸ್ಟ್ ಚಾರ್ಜಿಂಗ್ ಜತೆಗೆ ಟೈಪ್-ಸಿ ಪೋರ್ಟ್‌ನ್ನು ಹೊಂದಿದೆ. ದೀರ್ಘಕಾಲ ಬಾಳಿಕೆ ಬರುವ 4,500mAh ಬ್ಯಾಟರಿ ಹೊಂದಿದ್ದು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

    ಈ ಫೋನ್​ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, 12GB + 256GBಯ ಫೋನ್​ ಬೆಲೆ 29,300 ರೂಪಾಯಿ, 12GB + 512GBಯ ಬೆಲೆ 31,600 ರೂಪಾಯಿ ಹಾಗೂ 16GB + 1TBಯ ಬೆಲೆಯು 35,200 ಇರಬಹುದೆಂದು ಅಂದಾಜಿಸಲಾಗಿದೆ. ಅಲ್ಲದೇ, ಈ ಫೋನ್​ ಅಡ್ವೆಂಚರ್ ಗೋಲ್ಡ್, ಕೊಕೊನಟ್ ಗ್ರೇ, ಮಿಂಟ್ ಗ್ರೀನ್ ಮತ್ತು ರೋಸ್ ಪರ್ಪಲ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts