More

    ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯ, ಡಿಕೆಶಿಗೆ ಅವಮಾನಿಸಬೇಡಿ: ಆರ್.ಅಶೋಕ್ 

    ಬೆಂಗಳೂರು: ಚುನಾವಣೆಗೆ ಮುಂಚೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಸಹಿಯುಳ್ಳ ಗ್ಯಾರಂಟಿ ಕಾರ್ಡ್​​​ಗಳನ್ನು ರಾಜ್ಯದ ಪ್ರತಿ ಮನೆಗೆ ವಿತರಿಸಿ, ಕಾಂಗ್ರೆಸ್ ಅಧಿಕಾರವಹಿಸಿಕೊಂಡ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಐದು ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಿಸಿದ್ದರು.ಈಗ ಅದನ್ನು ಪಾಲಿಸಲೇಬೇಕು ಎಂದು ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಆಗ್ರಹಿಸಿದ್ದಾರೆ.

    ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ. ಐದು ಉಚಿತ ಗ್ಯಾರಂಟಿಗಳನ್ನು ಕೊಡಮಾಡಲಿದೆ. ದಯವಿಟ್ಟು ಕಾಂಗ್ರೆಸ್​​​ನವರು ಹೇಳಿದ್ದನ್ನು ಜನರು ಫಾಲೋ ಮಾಡಬೇಕು.ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೊದಲ ಸಚಿವ ಸಂಪುಟ ಸಭೆಯೂ ಆಗಿರುವ ಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸ್ವತಃ ಹೇಳಿದಂತೆಯೇ ಯಾರೊಬ್ಬರೂ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಬಸ್​​​ನಲ್ಲಿ ಉಚಿತವಾಗಿ ಪ್ರಯಾಣಿಸಲಿ. ನಾನು ಕಟ್ಟಲ್ಲ, ನೀವೂ ಕಟ್ಟಬೇಡಿ ಎಂದು ಅವರಿಬ್ಬರು ಹೇಳಿದ್ದಾರೆ. ಹೀಗಾಗಿ ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಅವಮಾನಿಸಬಾರದು ಎಂದು ರಾಜ್ಯದ ಜನರಿಗೆ ಆರ್.ಅಶೋಕ್ ಉಚಿತ ಸಲಹೆ ನೀಡಿದರು.

    ಇದನ್ನೂ ಓದಿ: ಖಾಸಗಿ ಮಾಹಿತಿ ಸೋರಿಕೆ; ಕಿರುಕುಳ ಅನುಭವಿಸುತ್ತಿದ್ದಾರಂತೆ ನಟಿ ಅದಾ ಶರ್ಮಾ!

    ಆರ್​​​ಎಸ್​ಎಸ್​ ನಿಷೇಧವಲ್ಲ, ಸಂಘದ ಒಂದು ಶಾಖೆಯನ್ನು ಕಾಂಗ್ರೆಸ್​ಗೆ ತಾಕತ್ತಿದ್ದರೆ ಮುಟ್ಟಲಿ ನೋಡೋಣ. ಹಿಂದುಗಳ ಧ್ವನಿಯಾಗಿರುವ ಆರ್​​​ಎಸ್​ಎಸ್​, ಭಜರಂಗದಳ ತಂಟೆಗೆ ಹೋದರೆ ಮೂರು ತಿಂಗಳಲ್ಲಿ ಪತನವಾಗಲಿದೆ ಎಂದು ಆರ್.ಅಶೋಕ್ ಎಚ್ಚರಿಸಿದರು.

    ಐದು ಗ್ಯಾರಂಟಿಗಳನ್ನು ಈಡೇರಿಸಲು ಜನರು ಪಟ್ಟು ಹಿಡಿದು ಒತ್ತಡ ಹೇರಲಾರಂಭಿಸಿದ್ದು, ವಿಷಯಾಂತರ ಮಾಡಲು ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಮುತ್ತಾತ, ಅಜ್ಜಿಗೂ ಆರ್​​​ಎಸ್​ಎಸ್​ ತಂಟೆಗೆ ಹೋಗಲಾಗಿಲ್ಲ. ನಿಷೇಧದ ಬಗ್ಗೆ ಸದನದಲ್ಲಿ ಧಮ್ಮಿದ್ದರೆ‌ ಬಿಲ್ ತರಲಿ ಎಂದು ಸೆಡ್ಡು ಹೊಡೆದರು.

    ಸಿದ್ದರಾಮಯ್ಯ ಅವರು 13 ಬಾರಿ ಬಜೆಟ್ ಮಂಡಿಸಿದವರು. ಉಚಿತ ಗ್ಯಾರಂಟಿ ಹೇಗೆ ಜಾರಿ ಮಾಡಬೇಕು, ಅವರಿಗೆ ಎಲ್ಲ ಮಾಹಿತಿಯಿದೆ, ಹೇಳಿದಂತೆ ನಡೆಯುತ್ತಾರೆ. ಡಬಲ್ ಸ್ಟೇರಿಂಗ್ ಸರ್ಕಾರದಲ್ಲಿ ಮಂತ್ರಿ ಪದವಿ, ಮಂತ್ರಿಯಾದವರಿಗೆ ಖಾತೆ ಗ್ಯಾರಂಟಿಯೇ ಸಿಕ್ಕಿಲ್ಲ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.

    ಮನೆ ಕೆಲಸದಾಕೆಯ ಅಸಭ್ಯ ವರ್ತನೆ; ಮೂತ್ರದಲ್ಲೇ ನೆಲ ಒರೆಸಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts