ಸಿನಿಮಾ

ಬೆಲ್ಲದಲ್ಲಿದೆ ಆರೋಗ್ಯದ ಗುಟ್ಟು; ಅನಾರೋಗ್ಯದ ಸಮಸ್ಯೆಗೆ ಇದುವೆ ಮದ್ದು

ಬೆಂಗಳೂರು: ಬೆಲ್ಲದ ಸೇವನೆ ಹಲವು ಆರೋಗ್ಯ ಪ್ರಯೋಜನ ತಂದು ಕೊಡುತ್ತದೆ. ಬೆಲ್ಲದ ಸೇವನೆ ಹಲವು ಅನಾರೋಗ್ಯ ಸಮಸ್ಯೆಯಿಂದ ಕಾಪಾಡುತ್ತದೆ. ಚಹಾ, ಬೆಲ್ಲದ ಸಿಹಿ ತಿಂಡಿ, ಖೀರ್ ಅಥವಾ ಚಪಾತಿ, ದೋಸೆ ಜೊತೆ ಸವಿಯಲಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಲ್ಲವನ್ನು ವಾಯುಮಾಲಿನ್ಯ, ಕಲುಷಿತ ವಾತಾವರಣದಲ್ಲಿ ವಾಸ ಮಾಡುವವರು ಸೇವನೆ ಮಾಡುವುದು ಮುಖ್ಯ.

ಬೆಲ್ಲದಲ್ಲಿರುವ ಆರೋಗ್ಯಕರ ಅಂಶ:
ಬೆಲ್ಲವು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು, ರಂಜಕ ಮತ್ತು ತಾಮ್ರ ಸೇರಿ ವಿಟಮಿನ್‌ ಮತ್ತು ಖನಿಜಗಳಿಂದ ಕೂಡಿದೆ. ಬೆಲ್ಲವು ಮೆಗ್ನೀಸಿಯಮ್, ವಿಟಮಿನ್ ಬಿ 1, ಬಿ 6 ಮತ್ತು ಸಿ ಯ ಉತ್ತಮ ಮೂಲ. ಬೆಲ್ಲವು ಉತ್ಕರ್ಷಣ ನಿರೋಧಕ, ಖನಿಜ ಹೊಂದಿದೆ.

jaggery

ಬೆಲ್ಲದ ಸೇವನೆಯಿಂದ ಆರೋಗ್ಯಕ್ಕೆ ಇರುವ ಪ್ರಯೋಜನ:
ಬೆಚ್ಚಗಿನ ನೀರಿನೊಂದಿಗೆ ಬೆಲ್ಲವನ್ನು ಸೇರಿಸಿ ಸವಿಯುವುದರಿಂದ ಮಹಿಳೆಯರಲ್ಲಿ ಹೆಚ್ಚಾಗಿ ರಕ್ತಹೀನತೆಯ ದೂರುವಾಗುತ್ತದೆ.
ಬಿಸಿ ನೀರು ಮತ್ತು ಬೆಲ್ಲ ಸೇವನೆ ಜೀರ್ಣಕಾರಿ ಕಿಣ್ವಗಳನ್ನು ವರ್ಧಿಸುತ್ತದೆ. ಜೀರ್ಣಕ್ರಿಯೆ ವೇಗವಾಗಿಸುತ್ತದೆ.

ಬೆಲ್ಲವನ್ನು ನಿಯಮಿತವಾಗಿ ಸೇವನೆ ಮಾಡುವುದುರಿಂದ ಕಿಡ್ನಿ ಸಂಬಂಧಿ ಕಾಯಿಲೆ ತಡೆಗೆ ಸಹಕಾರಿಯಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವವರಿಗೆ ಬೆಲ್ಲವು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಮೂತ್ರಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ? ಆಸ್ಪತ್ರೆಗೆ ಮಾಜಿ ಶಾಸಕ ಎ.ಮಂಜುನಾಥ್ ಭೇಟಿ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವ ಬದಲಾಗಿ ಬೆಲ್ಲದ ನೀರು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ.

jaggery

ಸಕ್ಕರೆ ಬದಲಾಗಿ ಬೆಲ್ಲ ಸೇವನೆ ಮಾಡುವುದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್ ಮತ್ತು ಖನಿಜ ಮಟ್ಟ ಸಮತೋಲನಗೊಳಿಸುತ್ತದೆ. ಕೊಬ್ಬನ್ನು ಕಡಿಮೆ ಮಾಡುತ್ತದೆ.

ಉಗುರು ಬೆಚ್ಚನೆಯ ನೀರಿನಲ್ಲಿ ಬೆಲ್ಲವನ್ನು ಬೆರೆಸಿ ಸೇವಿಸುವುದರಿಂದ ಹಾರ್ಮೋನ್ ಅಸಮತೋಲನವನ್ನು ಕಡಿಮೆ ಮಾಡಬಹುದು.

ಕಾಂಗ್ರೆಸ್​ ಸರ್ಕಾರದಲ್ಲಿ ಸಿಎಂ ಸೈಲೆಂಟ್​, ಡಿಸಿಎಂ ವೈಲೆಂಟ್:​ ಆರ್​. ಅಶೋಕ್​ ವಾಗ್ದಾಳಿ

Latest Posts

ಲೈಫ್‌ಸ್ಟೈಲ್