ಸಿನಿಮಾ

ಜೆಡಿಎಸ್ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ? ಆಸ್ಪತ್ರೆಗೆ ಮಾಜಿ ಶಾಸಕ ಎ.ಮಂಜುನಾಥ್ ಭೇಟಿ

ರಾಮನಗರ: ಬಿಡದಿ ಯೂತ್ ಕಾಂಗ್ರೆಸ್​ ಅಧ್ಯಕ್ಷ ಪ್ರವೀಣ್ ಎಂಬಾತ ಜೆಡಿಎಸ್​ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ಮಾಗಡಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 

ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರವೀಣ್, ಜೆಡಿಎಸ್​ ಕಾರ್ಯಕರ್ತರಾದ ಮಾಗಡಿಯ ಅಚ್ಯುತ್ ಮತ್ತು ಹನುಮಂತರಾಜು ಎನ್ನುವವರ ಮೇಲೆ ಗುರುವಾರ ರಾತ್ರಿ ಮಾಗಡಿಯ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು, ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ. 

ಇಬ್ಬರನ್ನೂ ಮಾಗಡಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕತ್ಸೆ ನೀಡಲಾಗಿದೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಸಿಪಿಐ ರವಿ ಬೇಟಿ ನೀಡಿ ಪರಿಶೀಲನೆಯನ್ನು  ನಡೆಸಿದ್ದಾರೆ. 

ಬಂಧನಕ್ಕೆ ಆಗ್ರಹ: ಕಾಂಗ್ರೆಸ್​ ಮುಖಂಡನಿಂದ ಜೆಡಿಎಸ್​ ಕಾರ್ಯಕರ್ತರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಶಾಸಕ ಎ.ಮಂಜುನಾಥ್​ ಆರೋಪಿಗಳನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಬಂಧನವಾಗದಿದ್ದರೆ ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. 

ಶುಕ್ರವಾರ ಮಾಗಡಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮಂಜುನಾಥ್​, ವೈಧ್ಯರೊಂದಿಗೆ ಆರೋಗ್ಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಸೂಕ್ತ ಚಿಕಿತ್ಸೆಯನ್ನು ನೀಡುವಂತೆಯೂ ಸಹ ಮನವಿ ಮಾಡಿದರು. 

 

Latest Posts

ಲೈಫ್‌ಸ್ಟೈಲ್