More

    ಕರ್ತವ್ಯದಲ್ಲಿದ್ದಾಗ ಹಿಜಾಬ್ ಧರಿಸಿದ ವೈದ್ಯೆ ಜತೆ ಗಲಾಟೆ; ಬಿಜೆಪಿ ಸದಸ್ಯನ ವಿರುದ್ಧ ಪ್ರಕರಣ ದಾಖಲು​​

    ತಮಿಳುನಾಡು: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಹಿಳಾ ವೈದ್ಯೆ ಕರ್ತವ್ಯದಲ್ಲಿದ್ದ ವೇಳೆ ಹಿಜಾಬ್ ಧರಿಸಿದ್ದಕ್ಕಾಗಿ ವಾಗ್ವಾದ ನಡೆಸಿದ ತಮಿಳುನಾಡು ಬಿಜೆಪಿ ಸದಸ್ಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ತಮಿಳುನಾಡಿನ ನಾಗಪಟ್ಟಣಂನ ಬಿಜೆಪಿ ಸದಸ್ಯರೊಬ್ಬರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯರೊಬ್ಬರು ಹಿಜಾಬ್ ಧರಿಸಿದ್ದಕ್ಕೆ ಆಕ್ಷೇಪ ಎತ್ತಿದ್ದಾರೆ. ಆಕೆಯ ಬಟ್ಟೆಯ ಆಯ್ಕೆಯ ಬಗ್ಗೆ ವ್ಯಕ್ತಿ ವೈದ್ಯರೊಂದಿಗೆ ವಾದಿಸಿದ್ದಕದ್ಕಾಗಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಬೆಲ್ಲದಲ್ಲಿದೆ ಆರೋಗ್ಯದ ಗುಟ್ಟು; ಅನಾರೋಗ್ಯದ ಸಮಸ್ಯೆಗೆ ಇದುವೆ ಮದ್ದು

    ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಬಿಜೆಪಿ ಸದಸ್ಯ ಭುವನೇಶ್ವರ್ ರಾಮ್ ಅವರು, “ನೀವು ಹಿಜಾಬ್ ಅನ್ನು ಏಕೆ ಧರಿಸಿದ್ದೀರಿ? ನೀವು ಕರ್ತವ್ಯದಲ್ಲಿಲ್ಲವೇ? ನಿಮ್ಮ ಸಮವಸ್ತ್ರ ಎಲ್ಲಿದೆ? ನೀವು ವೈದ್ಯರೇ ಎಂದು ನನಗೆ ಖಚಿತವಿಲ್ಲ, ”ಎಂದು ವ್ಯಕ್ತಿ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು. ನಂತರ ಅವರು ಇನ್ನೊಬ್ಬ ಮಹಿಳಾ ಆರೋಗ್ಯ ಸಿಬ್ಬಂದಿಯನ್ನು ಕೇಳುತ್ತಾರೆ, ಮಹಿಳೆಗೆ ತಾನು ವೈದ್ಯೆ ಎಂದು ಸಾಬೀತುಪಡಿಸಲು ಯಾವ ರುಜುವಾತುಗಳಿವೆ ಎಂದು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗದ್ದಲವನ್ನು ಸೃಷ್ಟಿಸಿದ್ದಾರೆ.

    ಮಹಿಳಾ ವೈದ್ಯೆ ಜನ್ನತ್ ಫಿರ್ಡ್‌ಹೌಸ್ ಹಿಜಾಬ್ ಧರಿಸಿರುವುದನ್ನು ಆಕ್ಷೇಪಿಸಿದ್ದಾರೆ. ಬುರ್ಖಾವನ್ನು ಧರಿಸಿದ್ದರಿಂದ ಅವರು ನಿಜವಾಗಿಯೂ ವೈದ್ಯರೇ ಎಂದು ರಾತ್ರಿ ಕರ್ತವ್ಯದಲ್ಲಿರುವ ವೈದ್ಯರನ್ನು ಎಂದು ಪ್ರಶ್ನೆ ಮಾಡಿದ್ದಾರೆ. ನಾಗಪಟ್ಟಣಂ ಜಿಲ್ಲೆಯ ತಿರುಪುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

    ಸ್ಥಳದಲ್ಲಿದ್ದವರು ಭುವನೇಶ್ವರ್ ರಾಮ್ ಗಲಾಟೆ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಮಹಿಳಾ ವೈದ್ಯೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

    ಟ್ರಾಲಿ ಬ್ಯಾಗ್​ನಲ್ಲಿ ಪತ್ತೆಯಾಯ್ತು ಹೋಟೆಲ್​ ಮಾಲೀಕನ ಶವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts