ರಾಹುಲ್ ಗಾಂಧಿ ಇನ್ನೂ ಯಾಕೆ ಮದುವೆಯಾಗಿಲ್ಲ!; ಇಲ್ಲಿದೆ ಉತ್ತರ..

Rahul Gandhi
Published on

ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕುರಿತು ಸಾಮಾನ್ಯವಾಗಿ ಎರಡು ಪ್ರಮುಖ ಪ್ರಶ್ನೆಗಳು ಎದುರಾಗುತ್ತವೆ. ಆ ಪೈಕಿ ಒಂದು ರಾಹುಲ್ ಗಾಂಧಿ ಯಾವಾಗ ಪ್ರಧಾನಮಂತ್ರಿ ಆಗುತ್ತಾರೆ ಹಾಗೂ ಇನ್ನೊಂದು ರಾಹುಲ್ ಗಾಂಧಿ ಮದುವೆ ಯಾವಾಗ? ಈ ಎರಡನೇ ಪ್ರಶ್ನೆಗೆ ರಾಹುಲ್ ಗಾಂಧಿಯೇ ಉತ್ತರ ನೀಡಿದ್ದಾರೆ.

ರಾಜಸ್ಥಾನದ ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಅಲ್ಲಿನ ವಿದ್ಯಾರ್ಥಿವೃಂದದೊಂದಿಗೆ ನಡೆದ ಸಂವಾದದಲ್ಲಿ ರಾಹುಲ್​ ಗಾಂಧಿಗೆ ಮತ್ತೆ ಮದುವೆ ಪ್ರಶ್ನೆ ಎದುರಾಗಿದ್ದು, ಅವರು ಅದಕ್ಕೆ ಉತ್ತರವನ್ನೂ ನೀಡಿದ್ದಾರೆ.

ನೀವು ಸುಂದರವಾಗಿದ್ದೀರಿ, ತುಂಬಾ ಚೆನ್ನಾಗಿ ಕಾಣಿಸುತ್ತೀರಿ, ಆದರೂ ಇನ್ನೂ ಯಾಕೆ ಮದುವೆ ಆಗಿಲ್ಲ ಎಂದು ಯುವತಿಯೊಬ್ಬಳು 53 ವರ್ಷದ ರಾಹುಲ್ ಗಾಂಧಿಯನ್ನು ಕೇಳಿದ್ದಳು. ನಾನು ನನ್ನ ಕೆಲಸ ಹಾಗೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಸಿಲುಕಿಕೊಂಡಿರುವುದರಿಂದ ಮದುವೆ ಆಗಿಲ್ಲ ಎಂದು ರಾಹುಲ್ ಉತ್ತರ ನೀಡಿದ್ದಾರೆ.

ಇನ್ನು ಈ ಸಂವಾದದಲ್ಲಿ ರಾಹುಲ್ ಗಾಂಧಿ ಕುರಿತ ಇನ್ನಷ್ಟು ವಿಚಾರಗಳ ಬಗ್ಗೆ ಕೇಳಲಾಗಿದ್ದು, ಅವರ ಇಷ್ಟದ ತಿಂಡಿ-ತಿನಿಸು, ಊಟ, ಆಸಕ್ತಿ ಇತ್ಯಾದಿಯ ಮಾಹಿತಿ ಬಹಿರಂಗಗೊಂಡಿದೆ.

ಅಲ್ಲದೆ ರಾಹುಲ್ ಗಾಂಧಿ ತ್ವಚೆಗೆ ಏನು ಹಚ್ಚುತ್ತಾರೆ ಎಂಬ ಪ್ರಶ್ನೆ ಕೂಡ ಕೇಳಲಾಗಿದ್ದು, ಅದಕ್ಕೂ ಅವರು ಉತ್ತರ ನೀಡಿದ್ದಾರೆ. ನಾನು ಮುಖಕ್ಕೆ ಯಾವುದೇ ಕ್ರೀಮ್ ಅಥವಾ ಸೋಪ್ ಬಳಸುವುದಿಲ್ಲ. ಮುಖವನ್ನು ಬರೀ ನೀರಿನಿಂದ ತೊಳೆಯುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net