ಪ್ರಧಾನಿ ಮೋದಿಗೆ ಆಪತ್ತಿದೆಯೇ?: ಸಹಾಯಕರ ಸೋಗಿನಲ್ಲಿ ಇರುವವರಿಂದಲೇ ತೊಂದರೆ!; ಏನಿದು ಭವಿಷ್ಯ?

Modi
Published on

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತಂತೆ ಭವಿಷ್ಯ ರೂಪದ ವರ್ತಮಾನವೊಂದು ಇದೀಗ ಅವರ ಅಭಿಮಾನಿಗಳು, ಅನುಯಾಯಿಗಳಲ್ಲಿ ಆತಂಕ ಆವರಿಸುವಂತೆ ಮಾಡಿದೆ. ಇದು ಭವಿಷ್ಯ ಎನ್ನಲಾಗಿದ್ದರೂ ಅದಾಗಲೇ ಇದು ಕೆಲವರನ್ನು ಭೂತದಂತೆ ಕಾಡಲಾರಂಭಿಸಿದೆ.

ಅನಿರುದ್ಧ್ ಕುಮಾರ್ ಮಿಶ್ರಾ ಎಂಬ ಜ್ಯೋತಿಷಿ ನುಡಿದಿರುವ ಈ ಭವಿಷ್ಯಕ್ಕೆ ಸಂಬಂಧಿಸಿದಂತೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ, ಹಲವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತಂತೆ ಕಾಳಜಿ ವ್ಯಕ್ತಪಡಿಸಿ ಪ್ರಾರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ಪ್ರಧಾನಿಯನ್ನು, ಮತ್ತೆ ಕೆಲವರು ಕೇಂದ್ರ ಗೃಹಸಚಿವರನ್ನು ಮೆನ್ಷನ್ ಮಾಡಿ ಗಮನ ಸೆಳೆಯಲು ಯತ್ನಿಸಿದ್ದಾರೆ. ಮಾತ್ರವಲ್ಲ 3 ಗಂಟೆಗಳಲ್ಲಿ 96 ಸಾವಿರಕ್ಕೂ ಅಧಿಕ ಮಂದಿಯ ಗಮನವನ್ನು ಈ ಎಕ್ಸ್​ ಪೋಸ್ಟ್ ಸೆಳೆದಿದೆ.

ಭವಿಷ್ಯ ಏನು?

'ಪ್ರೀತಿಯ ಭಾರತದ ಪ್ರಧಾನಮಂತ್ರಿಯವರೇ.. ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಬರಲಿವೆ, ನಿಮ್ಮ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ಸಹಾಯಕನ ವೇಷದಲ್ಲಿರುವ ಕೆಲವರು ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಾರೆ ಮತ್ತು ನಿಮಗೆ ಹಾನಿ ಮಾಡಲು ಸಹ ಪ್ರಯತ್ನಿಸಬಹುದು. ಜಾಗರೂಕರಾಗಿರಿ..' ಎಂದು ಈ ಅನಿರುದ್ಧ್ ಕುಮಾರ್ ಮಿಶ್ರಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net