

ತ್ರಿಸ್ಸೂರ್: ಹೋಟೆಲ್ ಒಂದರ ಕೋಣೆಯಲ್ಲಿ ವ್ಯಕ್ತಿಗಳಿಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಸ್ಸೂರ್ನಲ್ಲಿ ನಡೆದಿದೆ.
ಮೃತರನ್ನು ಒಲರಿಕ್ಕರದ ನಿವಾಸಿ ರಿಜೊ (26) ಮತ್ತು ಕರ್ಯತ್ತುಕುರಾ ನಿವಾಸಿ ಸಂಗೀತಾ ಎಂದು (26) ಎಂದು ಗುರುತಿಸಲಾಗಿದೆ. ಸಂಗೀತಾ ಪತಿ ನಡೆಸುತ್ತಿದ್ದ ಕ್ಯಾಟರಿಂಗ್ ಘಟಕದಲ್ಲಿ ರಿಜೊ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ.
ನಿನ್ನೆ ಇಬ್ಬರು ಹೋಟೆಲ್ ರೂಮ್ ಬುಕ್ ಮಾಡಿದ್ದರು. ಎಷ್ಟೇ ಕೂಗಿದರೂ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆಗೆದು ನೋಡಿದಾಗ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಂಗೀತಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸಂಗೀತಾ ಮತ್ತು ರಿಜೊ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ತ್ರಿಸ್ಸೂರ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)