More

    ಹಿಜಾಬ್​ ವಿವಾದದ ಬಗ್ಗೆ ಮಾತನಾಡಿದ್ದಕ್ಕೆ ಹಾಟ್​ ಫೋಟೋ ಶೇರ್​: ನೆಟ್ಟಿಗನಿಗೆ ಸ್ವರಾ ಕೊಟ್ಟ ಉತ್ತರ ಹೀಗಿತ್ತು…

    ಮುಂಬೈ: ತಮ್ಮ ನೇರ ನುಡಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸುವ ಮೂಲಕ ಕೆಲವೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಬಾಲಿವುಡ್​ ನಟಿ ಸ್ವರಾ ಭಾಸ್ಕರ್ ಆಗಾಗ ಟ್ರೋಲ್​ ಆಗುತ್ತಲೇ ಇರುತ್ತಾರೆ. ಆದಾಗ್ಯೂ ಟ್ರೋಲ್​ಗೆ ತಲೆಕೆಡಿಸಿಕೊಳ್ಳದ ಸ್ವರಾ, ತನಗೆ ಏನು ಅನಿಸುತ್ತದೆಯೋ ಅದನ್ನು ಯಾರಿಗೂ ಹೆದರದೆ ಹೇಳುತ್ತಾರೆ. ಅದೇ ರೀತಿ ಸ್ವರಾ ಅವರು ಇತ್ತೀಚೆಗೆ ಹಿಜಾಬ್​ ವಿವಾದದ ಬಗ್ಗೆ ಮಾತನಾಡಿದ್ದು, ದ್ರೌಪದಿಯ ವಸ್ತ್ರಾಪಹರಣವನ್ನು ಹಿಜಾಬ್​ ವಿವಾದಕ್ಕೆ ಹೋಲಿಸಿ ಸರಣಿ ಟ್ವೀಟ್​ಗಳನ್ನು ಮಾಡಿ ಮತ್ತೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

    ಮಹಾಭಾರತದಲ್ಲಿ ದ್ರೌಪದಿಯ ಬಟ್ಟೆಗಳನ್ನು ತುಂಬಿದ ಸಭೆಯಲ್ಲಿ ಬಲವಂತವಾಗಿ ಕಳಚಲಾಯಿತು. ಇಂದು ಜವಬ್ದಾರಿಯುತ ಹಾಗೂ ಶಕ್ತಿಯುತ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಕುಳಿತು ಹಿಜಾಬ್​ ವಿವಾದವನ್ನು ಸುಮ್ಮನೇ ನೋಡುತ್ತಿರುವುದನ್ನು ನೋಡಿದರೆ ಮಹಾಭಾರತದ ಸನ್ನಿವೇಶವೇ ನೆನಪಿಗೆ ಬರುತ್ತಿದೆ ಎಂದು ಸ್ವರಾ ಟ್ವೀಟ್​ ಮಾಡಿದ್ದಾರೆ.

    ಇದೀಗ ಸ್ವರಾ ಅವರ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಹೆಚ್ಚಾಗಿ ಟೀಕೆಗಳು ಕೇಳಿಬರುತ್ತಿವೆ. ದ್ರೌಪದಿ ಬಟ್ಟೆಯನ್ನು ಬಲವಂತವಾಗಿ ಕಳಚಿದರು. ಆದರೆ, ನೀವೇ ನಿಮ್ಮ ಬಟ್ಟೆಗಳನ್ನು ತೆಗೆದಿದ್ದೀರಿ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಸ್ವರಾ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರು ಧರಿಸಿದ್ದ ಶಾರ್ಟ್​ ಡ್ರೆಸ್​ ಸ್ಕ್ರೀನ್​ಶಾಟ್​ ಅನ್ನು ಶೇರ್​ ಮಾಡಿಕೊಂಡಿರುವ ಇನ್ನೊಬ್ಬ ನೆಟ್ಟಿಗ ನಿಮ್ಮ ಶಾರ್ಟ್​ ಡ್ರೆಸ್ ಬಗ್ಗೆ ಮಾತನಾಡಿ ಎಂದಿದ್ದಾನೆ.

    ನೆಟ್ಟಿಗರ ಟೀಕೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಸ್ವರಾ, ಹೌದು, ಅದು ನಾನೇ… ನೋಡಲು ತುಂಬಾ ಹಾಟ್​ ಆಗಿದ್ದೇನೆ ಧನ್ಯವಾದಗಳು! ನನ್ನ ಫೋಟೋವನ್ನು ಶೇರ್​ ಮಾಡಿದ್ದಕ್ಕೆ ಮತ್ತು ನಾನೂ ಕೂಡ ತುಂಬಾ ಹಾಟಿ ಎಂದು ಜಗತ್ತಿಗೆ ಮತ್ತೆ ನೆನಪು ಮಾಡಿದ್ದಕ್ಕೆ ಧನ್ಯವಾದಗಳು. ತಮ್ಮ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರ ಹಕ್ಕನ್ನು ನಾನು ಪ್ರತಿಪಾದಿಸುತ್ತೇನೆ ಎಂದಿದ್ದಾರೆ.

    ಮತ್ತೊಂದು ಟ್ವೀಟ್​ ಮಾಡಿರುವ ಸ್ವರಾ, ಮಧ್ಯಾಹ್ನದ ಶುಭಾಶಯಗಳು ಟ್ವಿಟ್ಟಿಗರೆ, ಇಲ್ಲಿ ಸಂಘಿಗಳ ಮತ್ತು ಆಯ್ಕೆ ಎಂಬ ಪರಿಕಲ್ಪನೆಯನ್ನು ಅರಿಯುವಲ್ಲಿ ಸಂಪೂರ್ಣ ವಿಫಲವಾಗಿರುವ ಕೆಲವರ ಟ್ವೀಟ್​ಗಳ ಕೆಲವೊಂದು ಸ್ಯಾಂಪಲ್​ ಇವೆ. ಇವರುಗಳು ಹತಾಶ ಮಾತುಗಳು ಇಲ್ಲಿವೆ ಎಂಜಾಯ್​ ಮಾಡಿ ಎಂದಿದ್ದಾರೆ.

    ಕರ್ನಾಟಕದಲ್ಲಿ ಎಬ್ಬಿರುವ ಹಿಜಾಬ್​ ವಿವಾದ ವಿಚಾರಣೆಯನ್ನು ಹೈಕೋರ್ಟ್​ ಏಕ ಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ಹಿಜಾಬ್​ ಪ್ರಕರಣ ವರ್ಗಾವಣೆ ಆಗಿದ್ದು, ಕಳೆದ ಮೂರು ದಿನಗಳಿಂದ ನಿರಂತರವಾಗಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಯಾವಾಗ ಬರಲಿದೆ ಎಂದು ಇಡೀ ದೇಶವೇ ಎದುರು ನೋಡುತ್ತಿದೆ. ಅಲ್ಲಿಯವರೆಗೆ ಶಾಲಾ-ಕಾಲೇಜು ತೆರೆಯುವಂತೆ ಮತ್ತು ಆದೇಶ ಬರುವವರೆಗೂ ಯಾವುದೇ ಧಾರ್ಮಿಕ ಉಡುಪು ಧರಿಸದಂತೆ ಹೈಕೋರ್ಟ್​ ವಿಸ್ತೃತ ಪೀಠ ಮಧ್ಯಂತರ ಆದೇಶ ಹೊರಡಿಸಿದರೂ ಹಿಜಾಬ್​ ವಿವಾದ ರಾಜ್ಯದಲ್ಲಿ ಮುಂದುವರಿದಿದೆ.

    ಇನ್ನೊಂದೆಡೆ ಹೈಕೋರ್ಟ್​ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ತಕ್ಷಣದ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಇಂತಹ ವಿಚಾರಗಳನ್ನು ರಾಷ್ಟ್ರೀಯ ಮಟ್ಟಕ್ಕೆ ಹರಡಬೇಡಿ. ಸೂಕ್ತ ಸಂದರ್ಭದಲ್ಲಿ ಮಾತ್ರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುತ್ತೇವೆ ಎಂದಿರುವ ಸುಪ್ರೀಂಕೋರ್ಟ್​ ತಕ್ಷಣ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ. (ಏಜೆನ್ಸೀಸ್​)

    ಮೈಸೂರಿಗೆ ಬಂದ ರೋಬೋ ಸುಂದರಿ! ಸೀರೆಯುಟ್ಟ ಸಪ್ಲೆಯರ್​… ಗ್ರಾಹಕರು ಫುಲ್​ ಖುಷ್​

    ಆತನ ದೃಷ್ಟಿ ಬಿತ್ತು ಎಂದರೆ ಸೆಕ್ಸ್‌ಗೆ ಕರೆದನೆಂದೇ ಅರ್ಥವಾಗಿದ್ದ ಕಾಲದ್ದು ಈ ಹಿಜಾಬ್‌ ಎಂದ ಲೇಖಕಿ ತಸ್ಲೀಮಾ ನಸ್ರೀನ್‌

    ಮಹಿಳೆಯ ತೂಕಕ್ಕಿಂತಲೂ ಹೆಚ್ಚು ಭಾರವಾದ ಗಡ್ಡೆಯನ್ನು ಹೊಟ್ಟೆಯಿಂದ ಹೊರತೆಗೆದ ವೈದ್ಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts