More

    ಆತನ ದೃಷ್ಟಿ ಬಿತ್ತು ಎಂದರೆ ಸೆಕ್ಸ್‌ಗೆ ಕರೆದನೆಂದೇ ಅರ್ಥವಾಗಿದ್ದ ಕಾಲದ್ದು ಈ ಹಿಜಾಬ್‌ ಎಂದ ಲೇಖಕಿ ತಸ್ಲೀಮಾ ನಸ್ರೀನ್‌

    ಬಾಂಗ್ಲಾದೇಶ: ಕರ್ನಾಟಕದಲ್ಲಿ ಶುರುವಾದ ಹಿಜಾಬ್‌ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಹೊಸ ವಿಷಯವಲ್ಲ. ಒಬ್ಬೊಬ್ಬರು ಒಂದೊಂದು ತೆರನಾದ ಹೇಳಿಕೆಯನ್ನು ಹಿಜಾಬ್‌ ಕುರಿತು ಹೇಳುತ್ತಿದ್ದಾರೆ. ಇವುಗಳ ಕುರಿತಂತೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್‌ ಹಿಜಾಬ್‌ ಜಾರಿ ಮಾಡಿದ್ದು ಏಕೆ? ಅದು ಇಂದು ಅವಶ್ಯಕತೆ ಇದೆಯೇ ಎಂಬ ಬಗ್ಗೆ ಹೇಳಿಕೆ ನೀಡಿದ್ದಾರೆ.

    ‘ಇಂಡಿಯಾ ಟುಡೆ’ ಪತ್ರಿಕೆಗೆ ಅವರು ನೀಡಿರುವ ಸಂದರ್ಶನಲ್ಲಿ ತಸ್ಲೀಮಾ ಹೇಳಿದ್ದೇನೆಂದರೆ, ‘ಮುಸ್ಲಿಂ ಮಹಿಳೆಯರನ್ನು ಕೇವಲ ಭೋಗದ ವಸ್ತು, ಆಕೆ ಇರುವುದೇ ಸೆಕ್ಸ್‌ಗಾಗಿ ಎಂದು ಅಂದುಕೊಂಡಿದ್ದ ಏಳನೇ ಶತಮಾನದಲ್ಲಿ ಇದನ್ನು ಪರಿಚಯಿಸಲಾಯಿತು. ಅದಕ್ಕಾಗಿ ಹಿಜಾಬ್‌ ಅಷ್ಟೇ ಅಲ್ಲದೇ ಬುರ್ಖಾ, ನಿಖಾಬ್‌ ಎಲ್ಲವೂ ಶುರುವಾದದ್ದು ಈ ಸೆಕ್ಸ್‌ ವಿಚಾರವಾಗಿಯೇ. ಇವೆಲ್ಲವೂ ಶೋಷಣೆಯ ಸಂಕೇತಗಳು ಎಂದಿದ್ದಾರೆ.

    ಏಳನೆಯ ಶತಮಾನದ ಕಾಲ ಆ ರೀತಿ ಇತ್ತು. ಮಹಿಳೆ ಕೇವಲ ಭೋಗದ ವಸ್ತುವಾಗಿದ್ದಳು. ಒಬ್ಬ ಗಂಡಸು, ಸ್ತ್ರೀಯೊಬ್ಬಳನ್ನು ನೋಡಿದ ಎಂದರೆ ಅವಳ ಕಥೆ ಅಷ್ಟೇ ಎನ್ನುವ ಸ್ಥಿತಿ ಇತ್ತು. ಹೀಗೇನಾದರೂ ಒಬ್ಬಳು ಸ್ತ್ರೀ ಪುರುಷನ ಕಣ್ಣಿಗೆ ಬಿದ್ದ ಎಂದರೆ ಆತ ಆಕೆಯನ್ನು ಲೈಂಗಿಕ ಸಂಪರ್ಕಕ್ಕೆ ಕರೆದ ಎಂದೇ ಅರ್ಥವಾಗಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಇಂಥ ಕಾಮುಕ ಪುರುಷರಿಂದ ರಕ್ಷಿಸಿಕೊಳ್ಳಲು, ಮುಖ ಮುಚ್ಚಿ ಓಡಾಡಲು ಹಿಜಾಬ್​, ಬುರ್ಕಾಗಳನ್ನು ಬಳಸತೊಡಗಿದರು. ತಮ್ಮ ಸೌಂದರ್ಯ ಆತನ ಮೇಲೆ ಬೀಳಬಾರದು, ತಮ್ಮ ಮಾನ ಹೋಗಬಾರದು ಎನ್ನುವ ಕಾಲದಲ್ಲಿ ಇದು ಜಾರಿಯಾದದ್ದು. ಇದೀಗ ಕಾಲ ಅದೆಷ್ಟು ಬದಲಾಗಿದೆ. ಈಗಲೂ ಅದನ್ನೇ ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಮುಸ್ಲಿಂ ಮಹಿಳೆಯರು ಬುರ್ಖಾ, ಹಿಜಾಬ್‌ ಎಲ್ಲವನ್ನೂ ತಮ್ಮ ಶೋಷಣೆಯ ಸಂಕೇತ ಎಂದೇ ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ.

    ಇನ್ನು ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತಸ್ಲೀಮಾ, ‘ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಇರಬೇಕು. ಶಿಕ್ಷಣದ ಹಕ್ಕು ಎಂಬುದೇ ಧಾರ್ಮಿಕ ಹಕ್ಕು ಎಂದು ನಂಬುವವಳು ನಾನು. ಮುಸ್ಲಿಮರಲ್ಲಿ ಕೆಲವರು ಹಿಜಾಬ್​ ತುಂಬ ಅತ್ಯಗತ್ಯವಾದದ್ದು ಅಂದುಕೊಂಡಿದ್ದಾರೆ. ಆದರೆ ಹಿಜಾಬ್​ ಅಷ್ಟೆಲ್ಲ ಮುಖ್ಯ ಅಂಶವಲ್ಲ ಎಂದಿರುವ ಲೇಖಕಿ, ಅದು ಜಾರಿಯಾದ ಉದ್ದೇಶವನ್ನು ತಿಳಿಸಿದ್ದಾರೆ.

    ಭಾರತ ಜಾತ್ಯತೀತ ರಾಷ್ಟ್ರ ಎಂದೇ ವಿಶ್ವದೆಲ್ಲೆಡೆ ಪ್ರಸಿದ್ಧವಾಗಿದೆ. ಅದರಲ್ಲೂ ಭಾರತದ ಶಾಲಾ-ಕಾಲೇಜುಗಳು ಜಾತ್ಯತೀತತೆಯ ಬಿಂಬಕಗಳು. ಹೀಗಿದ್ದಾಗ ಇಲ್ಲಿನ ವಸ್ತ್ರಸಂಹಿತೆ ಕೂಡ ಸೆಕ್ಯೂಲರ್ ಆಗಿರಬೇಕು. ಅದರಲ್ಲೂ ವಿದ್ಯಾರ್ಥಿಗಳು ಧರ್ಮಕ್ಕಿಂತಲೂ ಶಿಕ್ಷಣ ಮುಖ್ಯವೆಂಬ ಭಾವನೆ ಬೆಳೆಸಿಕೊಳ್ಳಬೇಕು. ಹಾಗೆಂದು ಧಾರ್ಮಿಕ ನಂಬಿಕೆಗಳನ್ನು ಆಚರಿಸುವುದು ತಪ್ಪು ಎಂದರ್ಥವಲ್ಲ. ಆದರೆ ಅದನ್ನು ಶಿಕ್ಷಣ ಸಂಸ್ಥೆಗಳಿಂದ ಆಚೆಗೆ, ಮನೆಯಲ್ಲಿ ಇಟ್ಟುಕೊಂಡರೆ ಸಾಕು. ವ್ಯಕ್ತಿ ತನ್ನ ಗುರುತನ್ನು ಧರ್ಮದೊಂದಿಗೆ ನಂಟು ಹಾಕಿಕೊಳ್ಳಬಾರದು ಎಂದು ತಸ್ಲೀಮಾ ಹೇಳಿದ್ದಾರೆ.

    VIDEO: ಶಾಂತಿಯುತವಾಗಿದ್ದ ಬಳ್ಳಾರಿ ಕಾಲೇಜಿನಲ್ಲಿ ಕಿಡಿ ಹೊತ್ತಿಸಿದ ಬುರ್ಕಾಧಾರಿ- ಹಲವೆಡೆ ಟ್ರೆಂಡ್‌ ಆದ ‘ಅಲ್ಲಾಹು ಅಕ್ಬರ್‌’!

    VIDEO: ‘ಅಲ್ಲಾಹು ಅಕ್ಬರ್‌’: ಘಟನೆ ಪೂರ್ವನಿಯೋಜಿತ ಎಂದ ಪಾಕಿಸ್ತಾನದ ಚಾನೆಲ್‌! ಶಾಕಿಂಗ್‌ ವಿಡಿಯೋ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts