More

    ‘ಓದಿಗಿಂತ ಮೊದ್ಲು ಹಿಜಾಬ್‌ ಬೇಕಿದ್ರೆ ಅಜ್ಜಂದಿರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿಕೊಳ್ಬೋದಿತ್ತಲ್ಲ!’

    ನವದೆಹಲಿ: ಕರ್ನಾಟಕದಲ್ಲಿ ಶುರುವಾಗಿರುವ ಹಿಜಾಬ್‌ ಸಂಘರ್ಷ ವಿಶ್ವಾದ್ಯಂತ ಕಾಳ್ಗಿಚ್ಚಿನಂತೆ ಹರಡಿ ಅನೇಕ ದಿನಗಳೇ ಕಳೆದವು. ಪಾಕಿಸ್ತಾನಿಗಳು ಸೇರಿದಂತೆ ಈ ವಿಷಯದ ಮಧ್ಯೆ ವಿನಾಕಾರಣ ಮೂಗು ತೂರಿಸಿ ಅಸಂಬದ್ಧ ಹೇಳಿಕೆ ನೀಡುತ್ತಾ ಹಿಜಾಬ್‌ ಸಂಘರ್ಷದ ಹಿನ್ನೆಲೆ ಕುರಿತು ಇನ್ನಷ್ಟು ಅನುಮಾನ ಹುಟ್ಟಿಹಾಕುವಂತೆ ಮಾಡುವವರ ಸಂಖ್ಯೆಯೂ ದಿನೇ ದಿನೇ ಏರುತ್ತಿದೆ.

    ಇದರ ನಡುವೆಯೇ ತಮಗೆ ಓದಿಗಿಂತ ಹಿಜಾಬೇ ಮುಖ್ಯ ಎನ್ನುತ್ತಿರುವ ಕೆಲವು ವಿದ್ಯಾರ್ಥಿನಿಯರ ನಡೆಯ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಪ್ರಾಣ ಬಿಡ್ತೇವೆಯೇ ಹೊರತು ಧರ್ಮ ಬಿಡುವುದಿಲ್ಲ ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಈ ಮಾತಿಗೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಇವರ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

    ‘ಮೊದಲು ಹಿಜಾಬ್ ನಂತರ ಓದು’ ಎಂದು ಮುಸ್ಲಿಮ್‌ ವಿದ್ಯಾರ್ಥಿನಿಯರು ಹೇಳುತ್ತಿರುವುದನ್ನು ಕೇಳಿದ್ದೇನೆ. ಹೀಗೆ ಘೋಷಣೆ ಕೂಗುತ್ತಾ ತರಗತಿಗಳನ್ನು ಬಹಿಷ್ಕರಿಸುವವರನ್ನು ನೋಡಿದ ಮೇಲೆ ನನಗೊಂದು ಪ್ರಶ್ನೆ ಕಾಡುತ್ತಿದೆ. ಅದೇನೆಂದರೆ ಓದಿಗಿಂತ ಹಿಜಾಬೇ ಮುಖ್ಯ ಆಗಿದ್ದರೆ ಇವರ ಅಜ್ಜಂದಿರು ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಭಾರತದಲ್ಲಿ ಉಳಿಯುವ ಆಯ್ಕೆ ಯಾಕೆ ಮಾಡಿದರು ಎನ್ನುವುದೇ ಅಚ್ಚರಿಯ ಸಂಗತಿ. ಒಂದು ವೇಳೆ ಅವರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡುತ್ತಿದ್ದರೆ ಸುಲಭವಾಗಿ ಹಿಜಾಬೇ ಮೊದಲು ಆಗುತ್ತಿತ್ತಲ್ಲ ಎಂದಿದ್ದಾರೆ.

    ಆತನ ದೃಷ್ಟಿ ಬಿತ್ತು ಎಂದರೆ ಸೆಕ್ಸ್‌ಗೆ ಕರೆದನೆಂದೇ ಅರ್ಥವಾಗಿದ್ದ ಕಾಲದ್ದು ಈ ಹಿಜಾಬ್‌ ಎಂದ ಲೇಖಕಿ ತಸ್ಲೀಮಾ ನಸ್ರೀನ್‌

    ಕರಿಕಲ್ಲಿನ ಮೇಲೆ ಬಿಳಿರೇಖೆಯಲ್ಲಿ ಮೂಡಿತ್ತು ‘ಹಿಜಾಬ್‌’ ಭವಿಷ್ಯ: ನಿಜವಾಯ್ತಾ ಕಾಲಜ್ಞಾನಿಯ ಮಾತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts