More

    ಹಿಜಾಬಾ? 30 ಅಂಕನಾ? ಇಂದಿನಿಂದ ಪಿಯು ಪರೀಕ್ಷೆ: ಹಾಜರಾಗದಿದ್ದರೆ ಮತ್ತೊಮ್ಮೆ ಸಿಗಲ್ಲ ಅವಕಾಶ…

    ಬೆಂಗಳೂರು: ಹೈಕೋರ್ಟ್‌ ನೀಡಿರುವ ಆದೇಶವನ್ನು ಧಿಕ್ಕರಿಸಿ ಹಲವೆಡೆ ವಿದ್ಯಾರ್ಥಿನಿಯರು ತಮಗೆ ಹಿಜಾಬ್‌ ಬೇಕು, ಇಲ್ಲದಿದ್ದರೆ ಕ್ಲಾಸ್‌ಗೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಇದರ ನಡುವೆಯೇ ಇಂದಿನಿಂದ (ಫೆ.21) ದ್ವಿತೀಯ ಪಿಯುಸಿಯ ಪ್ರಾಯೋಗಿಕ (ಪ್ರಾಕ್ಟಿಕಲ್‌) ಪರೀಕ್ಷೆಗಳು ಶುರುವಾಗಿದ್ದು, ಇದೀಗ ಹಿಜಾಬ್‌ಗೆ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರು ಮತ್ತು ಅವರನ್ನು ಬೆಂಬಲಿಸುತ್ತಿರುವವರನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ.

    ಹಿಜಾಬ್ ಕಾರಣ ನೀಡಿ ಪ್ರತಿದಿನ ಕಾಲೇಜು ಧಿಕ್ಕರಿಸಿದಂತೆ, ಇಂದು ಪರೀಕ್ಷೆಯನ್ನು ಬಹಿಷ್ಕಾರ ಮಾಡಿದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಇದಾಗಲೇ ಸ್ಪಷ್ಟಪಡಿಸಿದ್ದಾರೆ. ಇದಾಗಲೇ ಹಿಜಾಬ್‌ ಕಾರಣದಿಂದ ಪರೀಕ್ಷೆಗಳನ್ನು ಕೆಲ ದಿನ ಮುಂದೂಡಲಾಗಿತ್ತು. ಇದೀಗ ಮತ್ತೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದಿರುವ ಇಲಾಖೆ, ನಿಗದಿತ ವೇಳಾಪಟ್ಟಿಯಂತೆಯೇ ಪರೀಕ್ಷೆಗಳನ್ನು ಇಲಾಖೆ ನಡೆಸಲು ಸಜ್ಜಾಗಿದೆ. 25ರೊಳಗೆ ಪರೀಕ್ಷೆ ಮುಗಿಸುವಂತೆಯೂ ಇಲಾಖೆ ಹೇಳಿದೆ.

    ನಮಗೆ ಶಿಕ್ಷಣಕ್ಕಿಂತ ಹಿಜಾಬೇ ಮುಖ್ಯ ಎಂದು ಯಾರೋ ಹೇಳಿಕೊಟ್ಟಿರುವ ಮಾತನ್ನು ಹೇಳುತ್ತಾ, ತಮಗೆ ಶಿಕ್ಷಣ ನೀಡುತ್ತಿರುವ ಗುರುಗಳ ವಿರುದ್ಧವೇ ತಿರುಗಿ ಬಿದ್ದಿರುವ ವಿದ್ಯಾರ್ಥಿನಿಯರಿಗೆ ಇದೀಗ ಅಗ್ನಿ ಪರೀಕ್ಷೆಯ ಕಾಲ. ಉನ್ನತ ಶಿಕ್ಷಣ ಉದ್ಯೋಗದ ದೃಷ್ಟಿಯಲ್ಲಿ ಟರ್ನಿಂಗ್‌ ಪಾಯಿಂಟ್‌ ಎಂದು ಎನಿಸಿಕೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವಿದ್ಯಾರ್ಥಿನಿಯರು ಬಹಿಷ್ಕರಿಸುತ್ತಾರೆಯೋ ಅಥವಾ ಯಾರೋ ಮಾಡಿರುವ ಪಿತೂರಿಯಂತೆ ಇನ್ನೇನು ಗಲಾಟೆ ಸೃಷ್ಟಿ ಮಾಡುತ್ತಾರೆಯೋ ಎಂಬ ಭಯದಲ್ಲಿಯೇ ಕಾಲೇಜುಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಾಡು ಮಾಡಲಾಗಿದೆ.

    25ರೊಳಗೆ ಪರೀಕ್ಷೆ ಮುಗಿಸುವಂತೆಯೂ ಡೆಡ್‌ಲೈನ್ ಕೊಟ್ಟಿದೆ. ಇದೇ ಈಗ ಹಿಜಾಬ್‌ಗಾಗಿ ಕ್ಲಾಸ್‌ನಿಂದ ದೂರ ಉಳಿದಿರೋ ವಿದ್ಯಾರ್ಥಿನಿಯರಿಗೆ ದೊಡ್ಡ ಟೆನ್ಷನ್ ತಂದಿದೆ.

    ಇಂದಿನಿಂದ ನಡೆಯಲಿರುವ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ 30 ಅಂಕಗಳಿಗೆ ನಡೆಯಲಿದೆ. ಪ್ರಯೋಗಕ್ಕೆ 10 ಅಂಕ, ಪ್ರಯೋಗ ವಿಶ್ಲೇಷಣೆ – 10 ಅಂಕ, ರಿಕಾರ್ಡ್ ಬುಕ್ – 5 ಅಂಕ, ಸಂದರ್ಶನ (ವೈವಾ) – 5 ಅಂಕಗಳದ್ದಾಗಿದ್ದು, ಇದನ್ನು ವಿದ್ಯಾರ್ಥಿನಿಯರು ಬರೆಯದಿದ್ದರೆ 30 ಅಂಕ ಕಳೆದುಕೊಳ್ಳಲಿದ್ದಾರೆ.

    ಆತನ ದೃಷ್ಟಿ ಬಿತ್ತು ಎಂದರೆ ಸೆಕ್ಸ್‌ಗೆ ಕರೆದನೆಂದೇ ಅರ್ಥವಾಗಿದ್ದ ಕಾಲದ್ದು ಈ ಹಿಜಾಬ್‌ ಎಂದ ಲೇಖಕಿ ತಸ್ಲೀಮಾ ನಸ್ರೀನ್‌

    VIDEO: ಸರ್‌… ಈಗ ಗಲಾಟೆ ಮಾಡ್ತಿರೋರೇ ಇನ್‌ಸ್ಟಾ, ರೀಲ್ಸ್‌ನಲ್ಲಿ ಹಿಜಾಬ್‌ ತೆಗೀತಾರೆ… ಆಗ ಹುಡುಗರು ತೊಂದ್ರೆ ಕೊಡಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts