ಸ್ಥಳೀಯ ಹುಡುಗಿ ಜತೆ ಮೊಮ್ಮಗನಿಗೆ ಮದ್ವೆ ಮಾಡಿಸಲು ಮುಂದಾದ ಗ್ರಾಮಾಧ್ಯಕ್ಷ: ಮುಂದಾಗಿದೆಲ್ಲ ಅವಾಂತರ!

Gramadyaksha
Published on

ಭೋಪಾಲ್​: ಮದುವೆ ವಿವಾದ ಸಂಬಂಧ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನೇ ಅಪಹರಿಸಿರುವ ಘಟನೆ ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯ ಡಯಾಲಿ ಗ್ರಾಮದಲ್ಲಿ ನಡೆದಿದೆ. ಇಡೀ ಪ್ರಸಂಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣ ವೈರಲ್​ ಆಗಿದೆ.

ಈ ಬಗ್ಗೆ ಮಾತನಾಡಿರುವ ನೀಮುಚ್​ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸುಂದರ್​ ಸಿಂಗ್​ ಕನೇಶ್​, ಅವರ ಸಮುದಾಯದ ಸಂಪ್ರದಾಯದಂತೆ ಡಯಾಲಿ ಗ್ರಾಮದ ಅಧ್ಯಕ್ಷ ಬದ್ರಿ ಲಾಲ್​ ಮೊಮ್ಮಗನಿಗೆ ಚಿಕ್ಕಂದಿನಿಂಲದೇ ಬಾಲಗಂಜ್​ ಮೂಲದ ಹುಡುಗಿ ಜತೆ ಮದುವೆ ನಿಶ್ವಯವಾಗಿತ್ತು. ಆದರೆ, ಹುಡುಗಿ ಮನೆಯವರು ಅವಳನ್ನು ಅಧ್ಯಕ್ಷರ ಮನೆಗೆ ಮದುವೆ ಮಾಡಿಕೊಡಲು ಒಪ್ಪಲಿಲ್ಲ. ಬಳಿಕ ಸಂಧಾನಕ್ಕಾಗಿ ಎರಡು ಕಡೆಯವರನ್ನು ದೇವಸ್ಥಾನಕ್ಕೆ ಕರೆಯಿಸಲಾಗಿತ್ತು. ಆದರೆ, ಇಬ್ಬರ ನಡುವೆ ಸಂಧಾನದ ಬದಲು ಜಗಳು ಶುರುವಾಯಿತು ಎಂದಿದ್ದಾರೆ.

ಇದಾದ ಒಂದು ದಿನದ ಬಳಿಕ ಹುಡುಗಿ ಮನೆ ಕಡೆಯವರು ಬದ್ರಿ ಲಾಲ್​ನನ್ನು ರಸ್ತೆಯ ಮಧ್ಯೆಯೇ ತಡೆದು ಥಳಿಸಿ, ಅಪಹರಿಸಿದ್ದಾರೆ. ಈ ಘಟನೆ ನಡೆದ ಬಳಿಕ ಡಯಾಲಿ ಗ್ರಾಮದ ಜನರು ಬಾಲಗಂಜ್​ ಗ್ರಾಮಕ್ಕೆ ಬಹುದೊಡ್ಡ ಸಂಖ್ಯೆಯಲ್ಲಿ ತೆರಳಿ ಹುಡುಗಿ ಮನೆಯ ಮೇಲೆ ಹಲ್ಲೆ ಮಾಡಿದ್ದಾರೆ.

ಸದ್ಯ ಎರಡು ಕುಟುಂಬದ ಮೇಲೆ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net