ಸದ್ದಿಲ್ಲದೇ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೆ ಸೇರಿದ ಬಿಜೆಪಿ ಟಿಕೆಟ್ ವಂಚಿತ ಆರ್. ಶಂಕರ್​

R Shankar
Published on

ಹಾವೇರಿ: ಬಿಜೆಪಿ ಟಿಕೆಟ್ ವಂಚಿತ ಆರ್. ಶಂಕರ್ ಸದಿಲ್ಲದೇ ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಸೇರಿದ್ದಾರೆ. ಇಂದು ಬೆಳಗ್ಗೆ ತಮ್ಮ‌ ಮನೆಗೆ ಬಂದ ಬೆಂಬಲಿಗರಿಗೆ ಎನ್​ಸಿಪಿ ಧ್ವಜ, ಶಾಲು ನೀಡಿದ ಸ್ವಾಗತಿಸಿದ ಬಳಿಕ ಶಂಕರ್​ ಪಕ್ಷ ಸೇರ್ಪಡೆಯಾಗಿರುವ ಗುಟ್ಟು ಬಹಿರಂಗವಾಗಿದೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು...

ಆರ್.ಶಂಕರ್​ ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಶಂಕರ್​ಗೆ ಟಿಕೆಟ್ ನೀಡಿರಲಿಲ್ಲ. ಇದು ಅವರ ಅಸಮಾಧಾನಕ್ಕೂ ಕಾರಣವಾಗಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಶಂಕರ್ 2018ರಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದರು. ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ಶಂಕರ್ ಕಾಂಗ್ರೆಸ್​ನಿಂದ ಅನರ್ಹಗೊಂಡಿದ್ದರು.

ಎನ್​​ಸಿಪಿಯಿಂದ ಸ್ಪರ್ಧಿಸಲು ತಯಾರಿ

ಇದೀಗ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಎನ್​ಸಿಪಿ ಪಕ್ಷಕ್ಕೆ ಆರ್​.ಶಂಕರ್ ಸೇರ್ಪಡೆ ಆಗಿದ್ದಾರೆ. 2018ರಲ್ಲಿ ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ (ಕೆಪಿಜೆಪಿ) ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ಎನ್​​ಸಿಪಿಯಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net