ಲವರ್​​​ ಜತೆ ಸ್ಕೂಟಿಯಲ್ಲಿ ಹೋಗ್ತಿದ್ದ ಪತ್ನಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ಪತಿ! ಮುಂದೇನಾಯ್ತು ನೀವೇ ನೋಡಿ...

husband Wife
Published on

ನವದೆಹಲಿ: ಜನರ ಇಂದಿನ ಜೀವನಶೈಲಿಯು ತುಂಬಾ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ನಿಜವಾದ ಅಥವಾ ನಿಷ್ಠಾವಂತ ಜೀವನ ಸಂಗಾತಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರ ಎಂದು ಕೆಲವರು ಪರಿಗಣಿಸುತ್ತಾರೆ. ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ ಎಂದು ಭಾವಿಸುವುದು ಸಹ ಕಷ್ಟ ಎಂಬುದು ಕೆಲವರ ಅಭಿಪ್ರಾಯ. ಏಕೆಂದರೆ, ಅವನಾಗಲಿ/ಅವಳಾಗಲಿ ಯಾವುದೇ ಸಮಯದಲ್ಲಿ ಮೋಸ ಮಾಡುವ ಮತ್ತು ಬೇರೊಬ್ಬರೊಂದಿಗೆ ಸಂಬಂಧವನ್ನು ಹೊಂದುವ ಸಾಧ್ಯತೆಗಳು ಇವೆ. ಆದರೆ, ಯಾವುದೇ ಸಂಬಂಧಗಳಾಗಲಿ ಅದು ಹೆಚ್ಚು ಕಾಲ ರಹಸ್ಯವಾಗಿ ಉಳಿಯುವುದಿಲ್ಲ ಎಂಬುದು ಸಹ ಪರಮ ಸತ್ಯ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋವೊಂದು ಅದಕ್ಕೆ ಸಾಕ್ಷಿಯಾಗಿದೆ.

ಪ್ರಸ್ತುತ ವೈರಲ್​ ಆಗಿರುವ ವಿಡಿಯೋದಲ್ಲಿ ಪತ್ನಿಯು ಆಕೆಯ ಬಾಯ್​ಫ್ರೆಂಡ್​ ಜೊತೆ ಸ್ಕೂಟಿಯಲ್ಲಿ ಕದ್ದು ಮುಚ್ಚಿ ಹೋಗುತ್ತಿರುವುದನ್ನು ಪತಿರಾಯ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾನೆ. ಈ ವಿಡಿಯೋವನ್ನು ಗಿಡ್ಡೆ (giedde) ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಅಪ್​ಲೋಡ್​ ಮಾಡಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿ ಏನಿದೆ? ಪತ್ನಿ ಮತ್ತು ಆಕೆಯ ಬಾಯ್​ಫ್ರೆಂಡ್​ ಇಬ್ಬರು ಬೈಕ್​ನಲ್ಲಿ ಹೋಗುತ್ತಿರುವುದನ್ನು ಹಿಂಬಂದಿಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ಗಂಡ ನೋಡುತ್ತಾನೆ. ತಕ್ಷಣ ಇಬ್ಬರ ಮೇಲೆ ಕುಪಿತಗೊಳ್ಳುವ ಗಂಡ ಅಲ್ಲಿಯೇ ಇಬ್ಬರನ್ನು ನಿಂದಿಸಲು ಆರಂಭಿಸುತ್ತಾನೆ ಮತ್ತು ಇಬ್ಬರನ್ನು ತಡೆಯಲು ಬೆನ್ನಟ್ಟಿ ಹೋಗುತ್ತಾನೆ. ಆರಂಭದಲ್ಲಿ ಸ್ಕೂಟಿಯಲ್ಲಿ ಇರುವ ಮಹಿಳೆ ಮತ್ತು ವ್ಯಕ್ತಿಗೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗುವುದುಲ್ಲ. ಯಾವಾಗ ತನ್ನ ಪತಿಯ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದೇವೆ ಎಂದು ಗೊತ್ತಾದ ಕೂಡಲೇ ಸ್ಕೂಟರ್​​ ಅನ್ನು ವೇಗವಾಗಿ ಓಡಿಸುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಅವರನ್ನೇ ಹಿಂಬಾಲಿಸುವ ಗಂಡ ಕೊನೆಗೆ ಇಬ್ಬರನ್ನು ಅಡ್ಡಗಟ್ಟುತ್ತಾನೆ.

ಇದಾದ ಬಳಿಕ ಸ್ಕೂಟಿಯನ್ನು ಅಲ್ಲಿಯೇ ಎಲ್ಲೋ ನಿಲ್ಲಿಸಿ, ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net