VIDEO| ಬೆಳ್ಳಂಬೆಳಗ್ಗೆ ವಸತಿ ಶಾಲೆಗೆ ನುಗ್ಗಿದ ಒಂಟಿ ಸಲಗ: ಆತಂಕಕ್ಕೀಡಾದ ವಿದ್ಯಾರ್ಥಿಗಳು

Elephanrt
Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬುಧವಾರ ಮುಂಜಾನೆ ಕಾಡಾನೆ ಲಗ್ಗೆ ಇಟ್ಟು ವಿದ್ಯಾರ್ಥಿಗಳು ಆತಂಕಕ್ಕೆ ಈಡಾಗಿದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಂತಿ ಬೇಲಿಯನ್ನು ಕಿತ್ತು ಆನೆಯು ಒಳ ಪ್ರವೇಶಿಸಿದೆ. ಬೆಳಗಿನ ಜಾವ 5. 45 ಸಮಯದಲ್ಲೇ ಇಲ್ಲಿನ ಸಿಬ್ಬಂದಿಯು ಕುಡಿಯುವ ನೀರನ ಮೋಟರ್ ಸ್ವಿಚ್ ಆನ್ ಮಾಡಲು ತೆರಳುತ್ತಿರುವಾಗ ಆನೆಯನ್ನು ನೋಡಿದ್ದಾರೆ.

ತಕ್ಷಣ ಈ ಬಗ್ಗೆ ಶಾಲೆಯ ಶಿಕ್ಷಕರ ವರ್ಗದವರಿಗೆ ತಿಳಿಸಿ ಶಾಲಾ ಮಕ್ಕಳನ್ನು ಕೊಠಡಿ ಒಳಗೆ ಇರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿಯನ್ನು ತಿಳಿಸಿದ್ದಾರೆ. ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಏರ್ ಗನ್ , ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ಮಾಡಿ ಆನೆಯನ್ನು ಶಾಲೆಯಿಂದ ಯಾವುದೇ ರೀತಿಯ ತೊಂದರೆಯಾಗದ ರೀರಿಯಲ್ಲಿ ಆನೆಯನ್ನು ಶಾಲೆಯಿಂದ ಹೊರ ಹೋಗುವ ರೀತಿಯಲ್ಲಿ ಕಾಯ೯ಚರಣೆಯನ್ನು ಮಾಡಿದ್ದಾರೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net