ಮುಂದಿನ ವರ್ಷದಿಂದ ಇ- ಪಾಸ್​ಪೋರ್ಟ್​ ವಿತರಣೆ ಆರಂಭ: ಹೇಗಿರಲಿದೆ ಗೊತ್ತಾ ಈ ಪಾಸ್​ಪೋರ್ಟ್​?

E Passport
Published on

ನವದೆಹಲಿ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಂದಿನ ವರ್ಷದಿಂದ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದರು.

ವಿತ್ತ ಸಚಿವೆಯಾಗಿ ನಾಲ್ಕನೇ ಬಜೆಟ್​ ಮಂಡಿಸಿದ ನಿರ್ಮಲಾ ಸೀತಾರಾಮನ್​, ಭವಿಷ್ಯದ ತಂತ್ರಜ್ಞಾನ ಮತ್ತು ಚಿಪ್​ ಅಳವಡಿತ ಇ-ಪಾಸ್​ಪೋರ್ಟ್​ ಹೊರತರಲಾಗುವುದು. ಹೆಚ್ಚು ರಕ್ಷಣಾ ವೈಶಿಷ್ಟ್ಯಗಳನ್ನು ಪಾಸ್​ಪೋರ್ಟ್​ ಹೊಂದಿರಲಿದೆ ಎಂದು ಹೇಳಿದರು.

ಇ-ಪಾಸ್​ಪೋರ್ಟ್​ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್​ ಮತ್ತು ಬಯೋಮೆಟ್ರಿಕ್ ಬಳಸಲಾಗುವುದು ಹಾಗೂ ಪಾಸ್‌ಪೋರ್ಟ್‌ಗಳು ಅಂತರರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿರುತ್ತವೆ. ಪಾಸ್‌ಪೋರ್ಟ್ ಜಾಕೆಟ್‌ನಲ್ಲಿ ಎಲೆಕ್ಟ್ರಾನಿಕ್ ಚಿಪ್ ಇರಲಿದ್ದು, ಅದರ ಮೇಲೆ ಎನ್‌ಕೋಡ್ ಮಾಡಲಾದ ಭದ್ರತೆಗೆ ಸಂಬಂಧಿಸಿದ ಡೇಟಾ ಇರುತ್ತದೆ ಎಂದು ತಿಳಿಸಿದರು. ಪಾಸ್‌ಪೋರ್ಟ್‌ಗಳನ್ನು ಪ್ರಸ್ತುತ ಬುಕ್‌ಲೆಟ್‌ಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net