ಮನೆಯಲ್ಲಿ ಚಿನ್ನ ಕದ್ದು ಸಿಕ್ಕಿಬಿದ್ದ ಮಗ: ಸೋದರತ್ತೆಯ ಜತೆ 14 ವರ್ಷದ ಮಗನ ಲಾಡ್ಜ್​ ರಹಸ್ಯ ಬಯಲು!

Boy trap
Published on

ಹೈದರಾಬಾದ್​: ಹದಿನಾಲ್ಕು ವರ್ಷ ವಯಸ್ಸಿನ ಸೋದರಳಿಯನನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಮಹಿಳೆಯೊಬ್ಬಳು, ಆತನಿಗೆ ಗೊತ್ತಿಲ್ಲದಂತೆ ಸರಸ-ಸಲ್ಲಾಪದ ವಿಡಿಯೋ ಮಾಡಿಕೊಂಡು ಬೆದರಿಸಿ ಲಕ್ಷಾಂತರ ಹಣ ಲಪಾಟಿಯಿಸಿರುವ ಆತಂಕಕಾರಿ ಘಟನೆ ಹೈದರಾಬಾದ್​ನ ಬಂಜಾರ ಹಿಲ್ಸ್​ನಲ್ಲಿ ನಡೆದಿದೆ.

ಬರೋಬ್ಬರಿ 6 ಲಕ್ಷ ರೂಪಾಯಿ ಹಣವನ್ನು 14 ವರ್ಷದ ಸೋದರಳಿಯನ ಬಳಿ ಮಹಿಳೆ ಬೆದರಿಸಿ ವಸೂಲಿ ಮಾಡಿದ್ದು, ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗಷ್ಟೇ ಗಾಯತ್ರಿ ಹಿಲ್ಸ್​ ಬಳಿ ವಾಸವಿರುವ ಮಹಿಳೆಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳ್ಳತವಾಗಿತ್ತು. ಅದನ್ನು ಕದ್ದಿದ್ದು ಬೇರೆ ಯಾರ ಅಲ್ಲ. ಸ್ವತಂ ಮಹಿಳೆಯ 14 ವರ್ಷದ ಮಗನೇ. 9ನೇ ತರಗತಿ ಓದುತ್ತಿರುವ ಬಾಲಕ ಆಭರಣ ಕದ್ದು ಅದನ್ನು ಆತನ ಆಂಟಿಗೆ ನೀಡಿದ್ದ. ಈ ರೀತಿ ಯಾಕೆ ಮಾಡಿದೆ ಎಂದು ಬಾಲಕನನ್ನು ಪ್ರಶ್ನಿಸಿದಾಗ ಆಂಟಿಯ ಕರಾಳ ಮುಖವನ್ನು ತಾಯಿಗೆ ತಿಳಿಸಿದ್ದಾನೆ.

ಬೆಂಗಳೂರಿನಲ್ಲಿದ್ದ ತನ್ನ ಆಂಟಿ ಹೈದರಾಬಾದ್​ಗೆ ಬಂದಿದ್ದಾಗ. ಶಾಲೆಯಲ್ಲಿದ್ದ ಸೋದರಳಿಯನನ್ನು ಆಗಾಗ ಲಾಡ್ಜ್​ಗೆ ಕರೆದುಕೊಂಡು ಹೋಗಿ ಆತನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾಳೆ. ಅನೇಕ ಬಾರಿ ಆತನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಲ್ಲದೆ, ಆತನಿಗೆ ಗೊತ್ತಾಗದಂತೆ ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದಾಳೆ. ಬಳಿಕ ವಿಡಿಯೋವನ್ನು ತೋರಿಸಿ ಬೆದರಿಸಿದ್ದಾಳೆ. ಮೊದಲೇ ಬಾಲಕನ ಕುಟುಂಬ ಆರ್ಥಿಕವಾಗಿ ಸದೃಢರಾಗಿದ್ದರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಹಣವನ್ನು ತರದೇ ಹೋದರೆ ವಿಡಿಯೋವನ್ನು ಎಲ್ಲಾ ಕಡೆ ಹರಿಬಿಡುತ್ತೇನೆಂದು ಹೆದರಿಸಿದ್ದಾಳೆ.

ಆಂಟಿ ಮಾಡಿದ ಕೆಲಸದಿಂದ ಬೆದರಿದ ಬಾಲಕ ಆಕೆ ಹೇಳಿದಂತೆ ಕೇಳಲು ಶುರು ಮಾಡಿದ್ದಾನೆ. ಆಕೆ ಕೇಳಿದಂತೆಲ್ಲ ಮನೆಯಲ್ಲಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿ ಆಂಟಿಗೆ ನೀಡಿದ್ದಾನೆ. ಸುಮಾರು 6 ಲಕ್ಷ ರೂ. ಹಣವನ್ನು ನೀಡಿದ್ದಾನೆ. ಕೊನೆಗೆ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವುದನ್ನು ನೋಡಿ ಮಗನನ್ನು ವಿಚಾರಿಸಿದಾಗ ಆಂಟಿಯ ಕೃತ್ಯವನ್ನು ತಾಯಿಯ ಬಳಿ ಹೇಳಿಕೊಂಡಿದ್ದಾನೆ.

ಇದಾದ ಬಳಿಕ ಆರೋಪಿ ಮಹಿಳೆಯ ವಿರುದ್ಧ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net