More

    ಸರಣಿ ಕೊಲೆಗಳಿಗೆ ರೈಮ್ಸ್​ ಕಾರಣ!; ಡಿ. 10ಕ್ಕೆ ಚಿತ್ರಮಂದಿರಗಳಲ್ಲಿ ರಿಂಗಣ …

    ‘ಅಲ್ಲಿ ಅದೊಂದು ವಿಶಿಷ್ಟ ‘ರೈಮ್್ಸ’ ಕೇಳುತ್ತಿದ್ದಂತೆ ಇತ್ತ ಕೊಲೆಗಳಾಗುತ್ತವೆ …’- ಹೀಗೆ ‘ರೈಮ್್ಸ’ ಚಿತ್ರದ ಬಗ್ಗೆ ಸಣ್ಣ ಸುಳಿವು ನೀಡಿ ಕುತೂಹಲ ತಣಿಸಿದರು ನಿರ್ದೇಶಕ ಜ್ಞಾನಶೇಖರ್. ಕಮಲ್ ಹಾಸನ್ ಅವರ ಸಿನಿಮಾಗಳಲ್ಲಿ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ ಅಜಿತ್, ಮೊದಲ ಬಾರಿ ‘ರೈಮ್್ಸ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಒಂದಷ್ಟು ಹೊಸ ಪ್ರಯೋಗಗಳನ್ನು ಮಾಡಿದ್ದಾರಂತೆ. ‘ಹೀರೋಯಿಸಂ, ಕಮರ್ಷಿಯಲ್ ಅಂಶಗಳನ್ನು ಬದಿಗಿಟ್ಟು ಈ ಸಿನಿಮಾ ಮಾಡಿದ್ದೇವೆ. ರೈಮ್್ಸ ಹಿನ್ನೆಲೆಯಲ್ಲಿಯೇ ಇಡೀ ಕಥೆ ತೆರೆದುಕೊಳ್ಳಲಿದೆ. ಪ್ರತಿ ಪಾತ್ರಗಳಿಗೂ ಅದರದೇ ಆದ ತೂಕವಿದೆ. ಕಾಲ್ಪನಿಕ ಕಥೆಯಲ್ಲಿ ಕೊಲೆ, ಕೌತುಕ, ಸಸ್ಪೆನ್ಸ್ ಸಹ ಅಡಗಿದೆ’ ಎಂದರು ನಿರ್ದೇಶಕ ಅಜಿತ್.

    ಇನ್ನು ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದಾರೆ ನಟ ಅಜಿತ್ ಜಯರಾಜ್. ‘ಇದು ನನ್ನ ಆರನೇ ಸಿನಿಮಾ. ತುಂಬ ವಿಶೇಷವಾದ ಪಾತ್ರ. ಸರಣಿ ಕೊಲೆಗಳ ತನಿಖೆಯ ಹಿಂದೆ ಇಡೀ ಸಿನಿಮಾ ಸಾಗಲಿದೆ. ಇದೇ ಡಿ. 10ಕ್ಕೆ ಚಿತ್ರಮಂದಿರಗಳಿಗೆ ಬರುತ್ತಿದ್ದೇವೆ’ ಎಂದರು. ‘ಈ ಚಿತ್ರದಲ್ಲಿ ನನ್ನದು ಕ್ರೖೆಂ ಜರ್ನಲಿಸ್ಟ್ ಆವಂತಿಕಾ ಪಾತ್ರ. ಈವರೆಗಿನ ನನ್ನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಒಂದು ವಿಭಿನ್ನ ಮತ್ತು ಹೊಸ ಪ್ರಯತ್ನ ‘ರೈಮ್್ಸ’ ಚಿತ್ರದಲ್ಲಾಗಿದೆ. ಈ ಸಿನಿಮಾ ಬಳಿಕ ನನ್ನ ಸಿನಿಮಾ ಹಾದಿಯೂ ಬದಲಾಗಲಿದೆ’ ಎಂದರು ನಟಿ ಶುಭಾ ಪೂಂಜ. ಈ ಚಿತ್ರದಲ್ಲಿ ಸುಷ್ಮಾ ನಾಯರ್, ಅಜಿತ್ ಪತ್ನಿಯಾಗಿ ನಟಿಸಿದ್ದಾರೆ. ಸ್ಕೆ್ವೕರ್ ಕಾನ್ಸೆಪ್ಟ್ ಬ್ಯಾನರ್​ನಲ್ಲಿ ಜ್ಞಾನಶೇಖರ್, ರವಿಕುಮಾರ್ ಮತ್ತು ರಮೇಶ್ ಈ ಚಿತ್ರ ನಿರ್ವಿುಸಿ ದ್ದಾರೆ. ಅರ್ಜುನ್ ಛಾಯಾ ಗ್ರಹಣ, ಶಕ್ತಿ ಸಂಗೀತ, ಸಂತೋಷ್ ಅವರ ಸಂಕಲನ ವಿದೆ.

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts