More

  ಕಾಂಗ್ರೆಸ್‌-ಸಮಾಜವಾದಿ ಅಧಿಕಾರಕ್ಕೆ ಬಂದರೆ ಬುಲ್ಡೋಜರ್ ಮೂಲಕ  ಅಯೋಧ್ಯೆಯ ರಾಮಮಂದಿರ ಕೆಡವುತ್ತಾರೆ: ಮೋದಿ 

  ಬಾರಾಬಂಕಿ: ವಿಪಕ್ಷಗಳ ಮೈತ್ರಿಕೂಟ ಭಾಗವಾಗಿರುವ ಕಾಂಗ್ರೆಸ್​-ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಬುಲ್ಡೋಜರ್ ಮೂಲಕ ರಾಮಮಂದಿರವನ್ನು ಕೆಡವುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಆರೋಪ ಮಾಡಿದರು.

  ಇದನ್ನೂ ಓದಿ: ಪಾಕ್ ಬಳಿ ಅಣುಬಾಂಬ್ ಇದೆ ಅದನ್ನು ನಿರ್ವಹಿಸಲು ದುಡ್ಡಿಲ್ಲ: ಪ್ರಧಾನಿ ಮೋದಿ

  ಉತ್ತರಪ್ರದೇಶದ ಬಾರಬಂಕಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ ಅವರು, ಎಲ್ಲಿ ಬುಲ್ಡೋಜರ್ ಓಡಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಬಳಿ ಅವರು ಟ್ಯೂಷನ್ ತೆಗೆದುಕೊಳ್ಳಬೇಕು ಎಂದು ಮೋದಿ ತಿರುಗೇಟು ನೀಡಿದರು.

  ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಸಾಧಿಸಲಿದೆ ಎಂದು ಪ್ರತಿಪಾದಿಸಿದ ಮೋದಿ, ಹೊಸ ಸರ್ಕಾರದಲ್ಲಿ ಬಡವರು, ಯುವಕರು, ಮಹಿಳೆಯರು ಮತ್ತು ರೈತರಿಗಾಗಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಅದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

  ಸಮಾಜವಾದಿ-ಕಾಂಗ್ರೆಸ್‌ಗೆ ಮತಬ್ಯಾಂಕ್‌ಗಿಂತ ದೊಡ್ಡದು ಯಾವುದೂ ಇಲ್ಲ. ನಾನು ಅವರ ಮತಬ್ಯಾಂಕ್​ ರಾಜಕೀಯದ ಬಗ್ಗೆ ಬಯಲು ಮಾಡಿದರೆ ಅವರಿಗೆ ನರ್ವಸ್​ ಆಗ್ತಾರೆ, ಅವರಿಗೆ ನಿದ್ದೆ ಬರಲ್ಲ. ಆಗ ನನ್ನ ವಿರುದ್ಧ ಏನನ್ನಾದರೂ ಹೇಳಲು ಪ್ರಾರಂಭಿಸುತ್ತಾರೆ, ನಿಂದನೆಗಳು ಶುರುವಾಗುತ್ತೆ ಎಂದು ಹೇಳಿದರು.

  ಸಮಾಜವಾದಿ ಪಾರ್ಟಿ- ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಶರಣಾಗಿವೆ. ನಾನು ದೇಶಕ್ಕೆ ಸತ್ಯವನ್ನು ಹೇಳುತ್ತಿರುವಾಗ, ಮೋದಿ ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸುತ್ತಾರೆ. ನಮ್ಮ ತಾಯಂದಿರು ಮತ್ತು ಸಹೋದರಿಯರು ತ್ರಿವಳಿ ತಲಾಖ್ ಕಾನೂನಿನಿಂದ ಸಂತೋಷಪಟ್ಟಿದ್ದಾರೆ. ನಿರಂತರವಾಗಿ ಬಿಜೆಪಿ ಪಕ್ಷಕ್ಕೆ ಮತ್ತೆ ಆಶೀರ್ವಾದ ಮಾಡುತ್ತಾರೆ ಎಂದು ಮೋದಿ ಹೇಳಿದರು.

  ಅರವಿಂದ್​ ಕ್ರೇಜಿವಾಲ್​ ನಾಚಿಕೆಯಿಲ್ಲದೇ ಆರೋಪಿ ಜೊತೆ ತಿರುಗಾಡುತ್ತಿದ್ದಾರೆ: ನಿರ್ಮಲಾ ಸೀತಾರಾಮನ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts