More

  ರಕ್ತಹೀನತೆ ನಿವಾರಣೆಗೆ ಮಾತ್ರೆ ವಿತರಣೆ

  ಚಾಮರಾಜನಗರ : ಜಂತುಹುಳು ಮಕ್ಕಳ ರಕ್ತಹೀನತೆಗೆ ಕಾರಣವಾಗಿ, ಮಕ್ಕಳ ದೇಹದ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ದೊರೆಸ್ವಾಮಿನಾಯಕ ಹೇಳಿದರು.

  ತಾಲೂಕಿನ ಕಿರಗಸೂರು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆಗಳನ್ನು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ಮನುಷ್ಯನಿಗೆ ಆಹಾರ, ಆರೋಗ್ಯ, ಶಿಕ್ಷಣ ಮುಖ್ಯವಾಗಿದ್ದು, ಆರೋಗ್ಯವು ಉತ್ತಮವಾಗಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಆದರೆ ಜಂತುಹುಳುಗಳ ಬಾಧೆ ಮಕ್ಕಳಿಂದ ದೊಡ್ಡವರವರೆಗೂ ಕಾಡುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಮಕ್ಕಳು ಆಗಾಗ ಕಾಯಿಲೆ ಬೀಳುವ ಹಾಗೂ ಶಾಲೆಯಲ್ಲಿ ಪಠ್ಯದ ಮೇಲೆ ಗಮನಹರಿಸಲು ಅಸಮರ್ಥರಾಗಿರುತ್ತಾರೆ ಎಂದರು.

  ಜಿಲ್ಲಾ ಸಂಯೋಜಕ ಟಿ.ಜೆ.ಸುರೇಶ್ ಮಾತನಾಡಿ, 1 ರಿಂದ 19 ವಯಸ್ಸಿನ ಮಕ್ಕಳಿಗೆ ಮೇ.13 ರಿಂದ 27ರವರೆಗೆ ಸಮುದಾಯ ಆಧಾರಿತ ಕಾರ್ಯಕ್ರಮದ ಅಡಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಜಂತುಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜಂತುಹುಳುವಿನಿಂದ ಉಂಟಾಗುವ ರಕ್ತ ಹೀನತೆ, ನೆನಪಿನ ಶಕ್ತಿ ಕೊರತೆ ನೀಗಿಸಲು ಜಂತುಗಳ ನಿವಾರಣೆ ಅತ್ಯವಶ್ಯವಾಗಿದೆ. ಜಂತುಹುಳು ನಿವಾರಣೆಗಾಗಿ ಇಲಾಖೆಯು ವಿದ್ಯಾರ್ಥಿಗಳಿಗೆ ಉಚಿತವಾಗಿ ವರ್ಷಕ್ಕೆ ಎರಡು ಬಾರಿ ಅಲ್ಬೆಂಡ್‌ಜೋಲ್ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡುತ್ತಿದೆ. ಎಲ್ಲ ಮಕ್ಕಳೂ ಇದರ ಸದುಪಯೋಗ ಪಡೆದು ಜಂತುಹುಳು ಮುಕ್ತರಾಗಿ ಆರೋಗ್ಯವಂತರಾಗಬೇಕು ಎಂದರು. ಈ ವೇಳೆ ಸಿಎಚ್‌ಒ ಶಿಲ್ಪ, ತಾಸೀನಖಾನಂ, ಭಾಗ್ಯ, ಶಿಲ್ಪಾ, ಆಶಾ, ಲಕ್ಷ್ಮಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts